ಆರ್ಎಮ್‌ಎಸ್ ಕ್ವೀನ್ ಮೇರಿ ೨| colspan="2" style="text-align:center;line-height:1.5em;" | Career
Name:
RMS Queen Mary 2Owner:
Cunard Line[೧]Operator:
Cunard LinePort of registry:
ಗುಣಲಕ್ಷಣಗಳುಕ್ವೀನ್ ಮೇರಿ೨ ಕುನಾರ್ಡ್ ಲೈನ್‌ನ ಈಗಿನ ಸೇನಾಪತಿ ಹಡಗು ಆಗಿದೆ. ಅಂತಿಮವಾಗಿ, ೧೯೬೯ ರಿಂದ ೨೦೦೪ ರವರೆಗಿನ ಕುನಾರ್ಡ್ ಸೇನಾಪತಿ ಹಡಗು ಹಳೆಯದಾಗಿದ್ದರಿಂದ RMS Queen Elizabeth 2, ಅದನ್ನು ಸ್ಥಳಾಂತರಿಸಲು ಮತ್ತು ಕ್ವೀನ್ ಮೇರಿ ೨ಗಿಂತ ಮುಂಚೆ ನಿರ್ಮಾಣಗೊಂಡ ಕಟ್ಟ ಕಡೆಯ ಪ್ರಮುಖ ಹಡಗನ್ನು ಸ್ಥಳಾಂತರಿಸಲು ಈ ಹಡಗನ್ನು ನಿರ್ಮಿಸಲಾಯಿತು.[೧೦] ಕ್ವೀನ್ ಮೇರಿ೨ ೨೦೦೪ ರಲ್ಲಿ ತಾನು ನ್ಯೂಯಾರ್ಕ್ ಸೌತ್ ಆಂಪ್ಟನ್ ನಿಂದ ನ್ಯೂಯಾರ್ಕ್ ಮಾರ್ಗ ಕ್ಕೆ ತನ್ನ ಸೇವೆಯನ್ನು ಪ್ರಾರಂಭಿಸಿದಾಗ ಕುನಾರ್ಡ್ ಇತಿಹಾಸದ ಸ್ಮರಣಾರ್ಥ ರಾಯಲ್ ಮೇಲ್ ನಿಂದ ರಾಯಲ್ ಮೇಲ್ ಶಿಪ್ (ಆರ್ಎಮ್‌ಎಸ್) ಎಂಬ ಬಿರುದನ್ನು ಪಡೆದುಕೊಂಡಿತು.[೧೧] ತನ್ನ ಅನೇಕ ಇತರ ಮೊದಲ ಹಡಗುಗಳಂತೆ ಕ್ವೀನ್ ಮೇರಿ ೨ ಹಬೆ ಚಾಲಿತ ಹಡಗು ಆಗಿರಲಿಲ್ಲ, ಬದಲಾಗಿ ಹೆಚ್ಚುವರಿಯ ಶಕ್ತಿಯ ಅಗತ್ಯವಿದ್ದಾಗ ಎರಡು ಹೆಚ್ಚುವರಿ ಅನಿಲ ಟರ್ಬೈನ್ಗಳೊಂದಿಗೆ ನಾಲ್ಕು ಡೀಸಲ್ ಎಂಜಿನ್ಗಳಿಂದ ಕೂಡಿರುವ ವ್ಯವಸ್ಥೆಯನ್ನು ಹೊಂದಿದೆ. ಈ CODLAG ವಿನ್ಯಾಸವನ್ನು ಹಡಗಿನಲ್ಲಿರುವ ಹೋಟೆಲ್ ಗಳಿಗೆ ಬೇಕಾದ ವಿದ್ಯುತ್ ಶಕ್ತಿಯ ಪೂರೈಕೆಗೆ ಮತ್ತು ನಾಲ್ಕು ವಿದ್ಯುತ್ ಪಾಡ್ ಗಳು ಕಾರ್ಯ ನಿರ್ವಹಿಸಲು ಬೇಕಾದ ಶಕ್ತಿಯ ಅವಶ್ಯಕತೆಗೆ ಬಳಸಿಕೊಳ್ಳಲಾಗುತ್ತಿದೆ. ತನ್ನ ಮೊದಲಿಗರಂತೆ ಕ್ವೀನ್ ಎಲಿಜಬೆತ್ ೨ ನ್ನೂ ಸಹ, ಅದನ್ನು ಸಮುದ್ರಯಾನ ಉದ್ದೇಶಗಳಿಗೆ ನಿರಂತರವಾಗಿ ಬಳಸುತ್ತಿದರೂ, ಪ್ರಮುಖವಾಗಿ ಅಟ್ಲಾಂಟಿಕ್ ಮಹಾಸಾಗರವನ್ನು ದಾಟಲು ನಿರ್ಮಿಸಲಾಗಿತ್ತು; ಚಳಿಗಾಲದ ಸಮಯದಲ್ಲಿ ಹತ್ತು ಅಥವಾ ಮುವತ್ತು ದಿನಗಳ ಪ್ರವಾಸದ ಮೇಲೆ ನ್ಯೂಯಾರ್ಕ್ ನಿಂದ ಕೆರೇಬಿಯನ್‌ಗೆ ಪ್ರಯಾಣ ಮಾಡುತ್ತದೆ. ಕ್ವೀನ್ ಮೇರಿ ೨ 'ಯ ಮುಕ್ತ ಸಮುದ್ರದ ವೇಗವು, ಸರಾಸರಿ ವೇಗ 22.6 knots (41.9 km/h; 26.0 mph)ಇರುವ ಓಯಸಿಸ್ ಆಫ್ ದಿ ಸೀ ನಂತಹ ಪ್ರಯಾಣ ಹಡಗುಗಳನ್ನು ಮೀರಿದ್ದು, QM೨ 'ನ ಸಾಮಾನ್ಯ ಸೇವಾ ವೇಗವು ಆಗಿದೆ.26 knots (48 km/h; 30 mph)[೧೨] ವಿನ್ಯಾಸ ಮತ್ತು ನಿರ್ಮಾಣದ ರಚನೆ![]() ಕುನಾರ್ಡ್ ೮ ಜೂನ್ ೧೯೯೮ ರಂದು ೨,೦೦೦ ಪ್ರಯಾಣಿಕರು ಇರುವ ಹಡುಗಗಳ ನೂತನ ವರ್ಗದ 84,000 GT ವಿನ್ಯಾಸವನ್ನು ಸಂಪೂರ್ಣಗೊಳಿಸಿತು,ಆದರೆ ಕಾರ್ನಿವಲ್ ಪರ್ಯಟನಾ ಹಡಗುಗಳು ' 100,000 GT ಡೆಸ್ಟಿನಿ ಕ್ಲಾಸ್ ಪರ್ಯಟನಾ ಹಡಗುಗಳು ಮತ್ತು ರಾಯಲ್ ಕೆರೇಬಿಯನ್ ಇಂಟರ್ ನ್ಯಾಷನಲ್ 137,200 GT ''ವೊಯೇಜರ್ ಕ್ಲಾಸ್'' ಗಳಿಗೆ ಹೋಲಿಸಿದಾಗ ಈ ಹಡಗುಗಳನ್ನು ಪರಿಷ್ಕರಿಸಲಾಯಿತು.[೧೩] ಡಿಸೆಂಬರ್ ೧೯೯೮ರಲ್ಲಿ, ಕುನಾರ್ಡ್ ಪ್ರಾಜೆಕ್ಟ್ ಕ್ವೀನ್ ಮೇರಿ ಯ ವಿವರಗಳನ್ನು ಬಿಡುಗಡೆ ಮಾಡಿತು, ಇದು ಕ್ವೀನ್ ಎಲಿಜಬೆತ್ ೨ ಗೆ ಪೂರಕವಾದ ಹಡಗು ಒಂದನ್ನು ನಿರ್ಮಿಸುವ ಯೋಜನೆಯಾಗಿತ್ತು. ಉತ್ತರ ಐರ್ಲೆಂಡ್ ನ ಹಾರ್ಲಾಂಡ್ ಮತ್ತು ವೋಲ್ಫ್, ನಾರ್ವೆಯ ಏಕರ್ ವಾರ್ನರ್ ಇಟಲಿಯ ಫಿನ್ ಕ್ಯಾಂಟೆರಿ ಜರ್ಮನಿಯ ಮೇಯರ್ ವರ್ಫ್ಟ್ ಮತ್ತು ಫ್ರಾನ್ಸ್ ನ ಚಾಂಟಿಯರ್ಸ್ ಡೆ ಎಲ್ ಅಟ್ಲಾಂಟಿಕ್ ಗಳನ್ನು ಬಿಡ್ ಗೆ ಆಹ್ವಾನಿಸಲಾಯಿತು. ೬ ನವಂಬರ್ ೨೦೦೦ರಂದು ಆಲ್ ಸ್ಟಮ್ ನ ಸಹಾಯಕರಾದ ಚಾಂಟಿಯರ್ಸ್ ಡೆ ಎಲ್ ಅಟ್ಲಾಂಟಿಕ್ ನೊಂದಿಗೆ ಒಪ್ಪಂದದ ಸಹಿಯನ್ನು ಹಾಕಲಾಯಿತು. ಕುನಾರ್ಡ್‌ನ ಈ ಹಿಂದಿನ ಪ್ರತಿ ಸ್ಪರ್ಧಿಗಳಾದ ಕಂಪೈನ್ ಜೆನೆರಲ್ ಟ್ರಾನ್ಸ್ ಅಟ್ಲಾಂಟಿಕ್ನ SS Normandie ಮತ್ತುSS France ನ್ನು ಇದೇ ಅಂಗಳದಲ್ಲಿ ನಿರ್ಮಿಸಲಾಗಿತ್ತು.[೧೩] ೪ ಜುಲೈ ೨೦೦೨ ರಂದು ಸೇಂಟ್ -ನಜೈರ್ ಫ್ರಾನ್ಸ್ ನ ಲೂಯಿಸ್ ಜೌಬರ್ಟ್ ಲಾಕ್ನಲ್ಲಿ ಅದರ ಅಡಿಪಾಯವನ್ನು ೩}G೩೨ ಎಂಬ ಹಡಗಿನ ಹೊರ ಹೊದಿಕೆಯ ಸಂಖ್ಯೆಯೊಂದಿಗೆ ಹಾಕಲಾಯಿತು. ಸುಮಾರು ೩,೦೦೦ ಕುಶಲ ಕರ್ಮಿಗಳು ಹೆಚ್ಚು ಕಡಿಮೆ ಎಂಟು ಮಿಲಿಯನ್ ಗಂಟೆಗಳ ಕಾಲ ಹಡಗಿನ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು ಮತ್ತು ಸುಮಾರು ೨೦,೦೦೦ ಜನರು ಅದರ ವಿನ್ಯಾಸ, ನಿರ್ಮಾಣ ಮತ್ತು ಜೋಡಣೆಯ ಕಾರ್ಯದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತೊಡಗಿದರು. ಸುಮಾರು ೩೦೦,೦೦೦ ಕಬ್ಬಿಣದ ತುಂಡುಗಳನ್ನು ಜೋಡಿಸಿ ೯೪ ತೇವ ರಹಿತ ದಿಮ್ಮಿಗಳನ್ನಾಗಿ ಮಾಡಲಾಯಿತು, ನಂತರ ಇವುಗಳನ್ನು ಒಂದು ರಾಶಿಯನ್ನಾಗಿ ಮಾಡಿ ಬೆಸುಗೆ ಮಾಡುವುದರ ಮೂಲಕ ಸಂಪೂರ್ಣ ಹೊದಿಕೆಯನ್ನು ರಚಿಸಲಾಯಿತು.[೧೪] ೨೧ ಮಾರ್ಚ್ ೨೦೦೩ ರಂದು ಕ್ವೀನ್ ಮೇರಿ೨ ನೀರಿನ ಮೇಲೆ ತೇಲಿತು ೨೫ ಸೆಪ್ಟಂಬರ್ -೨೯ಸೆಪ್ಟಂಬರ್ ಮತ್ತು ೭–೧೧ ನವಂಬರ್ ೨೦೦೩ ರಂದು,[೧೫] ಸೇಂಟ್ - ನಜೈರ್ ಮತ್ತು ಐಲ್ ಡಿ ಯುನ ದ್ವೀಪಗಳಲ್ಲಿ ಮತ್ತು ಬೆಲ್ಲೆ- ಐಲ್‌ನ ನಡುವೆ ಅದರ ಸಮುದ್ರ ಪ್ರಯೋಗಗಳನ್ನು ನಡೆಸಲಾಯಿತು. ೧೫ ನವಂಬರ್ ೨೦೦೩ ರಂದು ಹಡಗು ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಹಾಗೂ ಹಡಗನ್ನು ವೀಕ್ಷಿಸಲು ಬಂದವರ ಬಂಧು ಬಳಗದವರ ಮೇಲೆ ಸೇತುವೆಯು ಕುಸಿದು ಬಿದ್ದು ಸಂಭವಿಸಿದ ಭಯಂಕರ ಅಪಘಾತವು ಹಡಗಿನ ನಿರ್ಮಾಣದ ಕಡೆಯ ಹಂತಗಳು ಸ್ಥಗಿತಗೊಳ್ಳುವಂತೆ ಮಾಡಿತು. 15-metre (49 ft) ತೇವರಹಿತ ಡಾಕ್ ನಲ್ಲಿ ಬಿದ್ದ[೧೬] ಪರಿಣಾಮವಾಗಿ ಒಟ್ಟು ೩೨ ಜನರು ಗಾಯಗೊಂಡರು ಮತ್ತು ೧೬ ಜನರು ಸಾವನ್ನಪ್ಪಿದರು.[೧೬] ನಿರ್ಮಾಣ ಕಾರ್ಯವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲಾಯಿತು. ಹಡಗಿನ ಅಂತಿಮ ಬೆಲೆ ಪ್ರತಿ ಬರ್ತ್‌ಗೆ ಸುಮಾರು $೩೦೦,೦೦೦ ರಷ್ಟಿತ್ತು, ಇದು ಹೆಚ್ಚು ಕಡಿಮೆ ಅನೇಕ ಪ್ಯಾಸೆಂಜರ್ ಹಡಗುಗಳಿಗಿಂತ ಎರಡು ಪಟ್ಟು ಹೆಚ್ಚಾಗಿತ್ತು. ಹಡಗಿನ ದೊಡ್ದ ಗಾತ್ರ, ಉನ್ನತ ಗುಣಮಟ್ಟದ ವಸ್ತುಗಳ ಬಳಕೆ ಮತ್ತು ಒಂದು ಸಾಮಾನ್ಯ ಹಡಗನ್ನು ವಿನ್ಯಾಸ ಗೊಳಿಸುವುದಕ್ಕೆ ಬಳಸಿದ್ದಕ್ಕಿಂತ ೪೦% ರಷ್ಟು ಹೆಚ್ಚಿನ ಕಬ್ಬಿಣವನ್ನು ಉಪಯೋಗಿಸಿದ್ದು ಇದರ ಉನ್ನತ ಬೆಲೆಗೆ ಕಾರಣವಾಯಿತು.[೯] ೨೬ ಡಿಸೆಂಬರ್ ೨೦೦೩ರಂದು ಕುನಾರ್ಡ್ ಸೌತ್ ಆಂಪ್ಟನ್,ಇಂಗ್ಲೆಂಡ್ ನಲ್ಲಿ ಬಿಡುಗಡೆ ಮಾಡಿತು. ೮ ಜನವರಿ ೨೦೦೪ ರಂದು ಹಡಗಿಗೆ ಆಕೆಯ ನಾಮಕೆ ವಾಸ್ತೆಯ ಮೊಮ್ಮಗಳಾದ ಕ್ವೀನ್ ಎಲಿಜಬೆತ್ IIರಿಂದ ನಾಮಕರಣ ಮಾಡಿಸಲಾಯಿತು.[೧೭][೧೮] ಹೊರಭಾಗ![]() ಕ್ವೀನ್ ಮೇರಿ ೨ 'ಯ ಪ್ರಮುಖ ನೌಕಾ ವಿನ್ಯಾಸಕಾರರು ಕಾರ್ನಿವಲ್ ನ ಹೌಸ್ ವಿನ್ಯಾಸಕಾರರಾದ ಸ್ಟೀಫನ್ ಪೈನ್.[೧೯] ಕ್ವೀನ್ ಎಲಿಜಬೆತ್೨ ಮತ್ತು ಹಡಗಿನ ಪೂರ್ವಜವಾದ ಕ್ವೀನ್ ಮೇರಿ ಯಂತಹ ಸಮುದ್ರ ಯಾನ ಹಡಗುಗಳನ್ನು ಹೋಲುವಂತೆ ಅನೇಕ ರೀತಿಯ ವಿನ್ಯಾಸಗಳನ್ನು ಅಳವಡಿಸುವುದು ಪೈನ್ ರವರ ಉದ್ದೇಶವಾಗಿತ್ತು. ಹಡಗಿನ ಸೇತುವೆಯ ಪರದೆಯ ಎರಡೂ ಕಡೆಗಳಲ್ಲಿ ಮತ್ತು ಉನ್ನತ ರಚನೆಯ ಹಿಂಭಾಗದ ತುದಿಯಲ್ಲಿ ಇರುವ ಮೂರು ಕಪ್ಪು ಪಟ್ಟಿಗಳು ಈ ಗುಣಲಕ್ಷಣಗಳಲ್ಲಿ ಪ್ರಮುಖವಾದವು, ಇವು ಮೊದಲ ಕ್ವೀನ್ ಮೇರಿ ಯ ಮುಂಭಾಗದ ಡೆಕ್ ಗಳನ್ನು ನೆನಪಿಸುವಂತೆ ಕಾಣುತ್ತವೆ.[೨೦] ಕ್ವೀನ್ ಮೇರಿ ೨ ಹಡಗು ಹೆಚ್ಚಿನ ವೇಗದಲ್ಲಿ ಚಲಿಸುವಾಗ ಬರುವ ಗಾಳಿಯಿಂದ ಪ್ರಯಾಣಿಕರನ್ನು ರಕ್ಷಿಸಲು ಗಾಳಿ ಪರದೆಗಳಿರುವ 14,164-square-metre (3.500-acre) ಹೊರಗಿನ ಡೆಕ್ ಅವಕಾಶವನ್ನು ಹೊಂದಿದೆ. ಹಡಗಿನಲ್ಲಿರುವ ಐದು ಈಜುಕೊಳಗಳಲ್ಲಿ ನಾಲ್ಕು ಹೊರಾಂಗಣದ ಈಜುಕೊಳಗಳಾಗಿವೆ( ಇವುಗಳಲ್ಲಿ ಒಂದು ಮಾತ್ರ ಚಿಕ್ಕ ಮಕ್ಕಳ ಉಪಯೋಗಕ್ಕಾಗಿ ಒಂದು ಇಂಚು ಆಳವಿದೆ) ಡೆಕ್ ೧೨ ರಲ್ಲಿರುವ ಒಂದು ಈಜುಕೊಳವು ಹಿಂದೆ ಮುಂದೆ ಸರಿಯಬಹುದಾದ ಒಂದು ಮಾಗ್ರೊ ಡೋಮ್ ನಿಂದ ಮುಚ್ಚಲ್ಪಟ್ಟಿದೆ. ಕ್ಯಾನಿಯಾನ್ ರಾಂಚ್ ಸ್ಪಾ ಕ್ಲಬ್ ನಲ್ಲಿ, ಡೆಕ್ ೭ ರಲ್ಲಿ ಒಳಾಂಗಣ ಈಜು ಕೊಳವಿದೆ.[೨೧] SS Rotterdamಯಂತಹ ಸಹಜ ಹಡಗುಗಳೊಂದಿಗೆ, ಡೆಕ್ ೭ ರಲ್ಲಿ ವಾಯು ವಿಹಾರ ಡೆಕ್ ನ ಸುತ್ತ ಒಂದು ನಿರಂತರ ಹೊದಿಕೆ ಇದೆ. ವಾಯು ವಿಹಾರಿ ಡೆಕ್ ಸೇತುವೆ ಪರದೆಯ ಹಿಂಭಾಗದಲ್ಲಿ ಹಾದು ಹೋಗುತ್ತದೆ ಮತ್ತು ಹಡಗು ಅತಿ ಹೆಚ್ಚು ವೇಗದಲ್ಲಿ ಚಲಿಸುವಾಗ ಉಂಟಾಗುವ ಪ್ರಭಲವಾದ ಮಾರುತಗಳಿಂದ ಪ್ರಯಾಣಿಕರನ್ನು ರಕ್ಷಿಸಲು ಡೆಕ್ ನ ಸುತ್ತ ಸಂಚರಿಸುವುದಕ್ಕೆ ಅವಕಾಶವನ್ನು ಮಾಡಿಕೊಡುತ್ತದೆ. ವಾಯು ವಿಹಾರಿ ಡೆಕ್ ನ ಒಂದು ಸುತ್ತಿನಷ್ಟು ದೂರವಿದೆ. ಸೂಪರ್ ರಚನೆಯಲ್ಲಿ ರಕ್ಷಣಾ ದೋಣಿಗಳು ನಿಲ್ಲಲು ಸ್ಥಳಾವಕಾಶವನ್ನು ಕಲ್ಪಿಸುವುದಕ್ಕೋಸ್ಕರ ಹಡಗಿನ ಪಾರ್ಶ್ವಗಳಲ್ಲಿ ವಾಯುವಿಹಾರಿಗಳನ್ನು ನಿರ್ಮಿಸಲಾಯಿತು. SOLAS ನ ಗುಣಮಟ್ಟಗಳ ಪ್ರಕಾರ ರಕ್ಷಣಾ ದೋಣಿಗಳು ಹಡಗಿನ ಹೊದಿಕೆಯ ಕೆಳ ಭಾಗದಲ್ಲಿ (15 m (49 ft) ನೀರಿನ ಮಟ್ಟದ ಮೇಲೆ ) ಇರಬೇಕಾಗಿತ್ತು, ಆದರೆ ಕ್ವೀನ್ ಮೇರಿ ೨ 'ಯ ಹೊರನೋಟದ ದೃಷ್ಟಿಯಿಂದ ಹಾಗೂ ಉತ್ತರ ಅಟ್ಲಾಂಟಿಕ್ ಮಾರುತಗಳ ಭಯದಿಂದ ರಕ್ಷಣಾ ದೋಣಿಗಳನ್ನು ಸಂರಕ್ಷಿಸುವ ದೃಷ್ಟಿಯಿಂದ, ಪೈನ್ ರವರು SOLAS ಅಧಿಕಾರಿಗಳಿಗೆ ಕ್ವೀನ್ ಮೇರಿ೨ ಯನ್ನು ಈ ಅವಶ್ಯಕತೆಯಿಂದ ರಿಯಾಯಿತಿ ನೀಡುವಂತೆ ಮತ್ತು ದೋಣಿಗಳನ್ನು 25 m (82 ft) ನೀರಿನ ಮಟ್ಟಕ್ಕಿಂತ ಮೇಲೆ ಇಡುವಂತೆ ಮನವೊಲಿಸಿದರು.[೨೨] ಪೈನ್ ರವರ ಮೊದಲ ಉದ್ದೇಶವೆಂದರೆ, ಬಹುಪಾಲು ಹಿಂದಿನ ಹಡಗುಗಳಿಗಿದ್ದಂತೆ, ಈ ಹಡಗಿನ ಹಿಂಭಾಗಕ್ಕೆ ಚಮಚದ ಆಕಾರವನ್ನು ಕೊಡುವುದಾಗಿತ್ತು, ಆದರೆ ನೂಕು ಪಾಡ್ ಗಳನ್ನು ಹಾಕಲು ಸಮತಟ್ಟಾದ ಅಡ್ಡ ಪಟ್ಟಿಯ ಅಗತ್ಯವಿತ್ತು. ಕಡೆಯದಾಗಿ ಈ ಎರಡರ ಸಂಯೋಗವೇ - ಕಾಂಸ್ಟಾನ್ಜಿ ಸ್ಟರ್ನ್ ಕಾಂಸ್ಟಾನ್ಜಿ ಸ್ಟರ್ನ್ ನೂಕು ಪಾಡ್ ಗಳಿಗೆ ಅಗತ್ಯವಾದ ಅಡ್ಡಪಟ್ಟಿಯನ್ನು ಒದಗಿಸಿದ್ದರಿಂದ ಅಂತಿಮ ರೂಪು ರೇಷೆಯನ್ನು ಒಪ್ಪಿಕೊಳ್ಳಲಾಯಿತು ಹಾಗೂ ಇದು ಒಂದು ಉತ್ತಮ ಗುಣಮಟ್ಟದ ಹಿಂಭಾಗದ ಅಡ್ಡ ಪಟ್ಟಿಗಿಂತ ಉತ್ತಮ ಲಕ್ಷಣಗಳನ್ನು ಹೊಂದಿದ್ದು ಸಮುದ್ರದಲ್ಲಿ ತೇಲಲು ಅನುಕೂಲಕರವಾಗಿ ಇತ್ತು.[೨೩] ಪ್ಯಾಸೇಂಜರ್ ಮತ್ತು ಪರ್ಯಟನಾ ಹಡಗುಗಳೆರಡರಲ್ಲೂ ಬಹುತೇಕ ಆಧುನಿಕ ಹಡಗುಗಳಲ್ಲಿ ಸಹಜವಾಗಿ ಕಂಡು ಬರುವಂತೆ, ಕ್ವೀನ್ ಮೇರಿ೨ ಯೂ ಸಹ ಸೆಳೆತ ವನ್ನು ಕಡಿಮೆಗೊಳಿಸಲು ಉಬ್ಬಿದ ಕಮಾನ ನ್ನು ಹೊಂದಿದೆ ಮತ್ತು ಅಷ್ಟೇ ಅಲ್ಲದೆ ಇದು ವೇಗವನ್ನು ಹೆಚ್ಚಿಸುವುದಲ್ಲದೆ ಇಂಧನದ ದಕ್ಷತೆಯನ್ನೂ ವೃದ್ಧಿಗೊಳಿಸುತ್ತದೆ.[೨೪] ಆದರೆ, ಕ್ವೀನ್ ಎಲಿಜಬೆತ್ ೨ ನ ವಿನ್ಯಾಸದಂತೆಯೇ, ಕ್ವೀನ್ ಮೇರಿ ೨ 'ಯ ಹೊಗೆ ಕೊಳವೆಯನ್ನು ಕೊಂಚ ಭಿನ್ನ ವಾದ ಆಕಾರದಲ್ಲಿ ರೂಪುಗೊಳಿಸಲಾಯಿತು. ಈ ಭಿನ್ನತೆಯ ಅಗತ್ಯತೆಯ ಕಾರಣವೆಂದರೆ, ಹಡಗಿನ ಎತ್ತರ ಮತ್ತು ಎತ್ತರದ ಹೊಗೆ ಕೊಳವೆಯು ನ್ಯೂಯಾರ್ಕ್ ನಗರ ದ ವರ್ಜಾನೋ- ನ್ಯಾರೋಸ್ ಬ್ರಿಡ್ಜ್ನ ಅಡಿಯಲ್ಲಿ ದೊಡ್ಡ ಅಲೆಗಳು ಬರುವಂತಹ ಸಮಯದಲ್ಲಿ ಹಡಗು ಅದರ ಸುಲಭವಾಗಿ ಹಾದು ಹೋಗಲು ಅನುಕೂಲಕರವಾಗಿತ್ತು. ಈಗ ಅಂತಿಮ ರೂಪುರೇಷೆಯು ದೊಡ್ಡ ಅಲೆಗಳಲ್ಲಿ ಸೇತುವೆಯನ್ನು ದಾಟುವುದಕ್ಕೆ ಅಗತ್ಯವಾದ ಕನಿಷ್ಟ 13 feet (4.0 m) ಅವಶ್ಯಕತೆಯನ್ನು ಪೂರೈಸುವಂತೆ ಇತ್ತು.[೨೫] ಹಲವಾರು ಬಂದರುಗಳಲ್ಲಿ ನಿಲ್ಲಲು ಕ್ವೀನ್ ಮೇರಿ ೨ ಅತ್ಯಂತ ದೊಡ್ಡ ಡೆಕ್ ನ್ನು ಹೊಂದಿರುವುದರಿಂದ, ಪ್ರಯಾಣಿಕರು ಹಡಗಿನಿಂದ ಹೊರಗೆ ಮತ್ತು ಒಳಗೆ ಬರಲು ಟೆಂಡರ್ ಗಳನ್ನು ಬಳಸಬೇಕಾಗುತ್ತದೆ, ಇವುಗಳನ್ನು ತುರ್ತಾಗಿ ರಕ್ಷಣಾ ದೋಣಿಗಳನ್ನಾಗಿ ಬಳಸಲಾಗುತ್ತದೆ. ಆದರೆ ಸಮುದ್ರದಲ್ಲಿ, ಇವುಗಳನ್ನು ರಕ್ಷಣಾ ದೋಣಿಗಳ ಪಕ್ಕದಲ್ಲಿರುವ ಡ್ಯಾವಿಟ್ ಗಳಲ್ಲಿ ಇರಿಸಲಾಗಿರುತ್ತದೆ. ಪ್ರಯಾಣಿಕರನ್ನು ತೀರಕ್ಕೆ ಸಾಗಿಸಲು, ಒಂದರಿಂದ ನಾಲ್ಕು ಸ್ಟೇಷನ್ ಭಾರ ಹೊತ್ತಿರುವ ಟೆಂಡರ್ ಗಳು ಎಳೆಯುತ್ತವೆ, ಇವು ಅಳಿಗಳು ಮತ್ತು ಡೆಕ್ ವ್ಯವಸ್ಥೆ ಇರುವ ಪ್ಲಾಟ್ ಫಾರಂ ನ್ನು ಉಂಟು ಮಾಡಲು ಒಂದು ದೊಡ್ಡ ಹೈಡ್ರಾಲಿಕ್ ಬಾಗಿಲನ್ನು ಹೊಂದಿವೆ.[೧೨] ಕ್ವೀನ್ ಮೇರಿ ೨ ಒಂದು ಪೋಸ್ಟ್ -ಪನಾಮಾಕ್ಸ್ ಹಡಗು ಆಗಿದೆ. ಈ ಕಾರಣದಿಂದಾಗಿಯೇ ಕ್ವೀನ್ ಮೇರಿ ೨ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ನ್ನು ಹಾದು ಹೋಗಲು ದಕ್ಷಿಣ ಅಮೇರಿಕಾವನ್ನು ಪ್ರದಕ್ಷಿಣೆ ಹಾಕ ಬೇಕಾಗುತ್ತದೆ. ಕ್ವೀನ್ ಎಲಿಜಬೆತ್೨ ಪ್ರಪಂಚ ಪರ್ಯಟನೆಯಲ್ಲಿ ವರ್ಷಕ್ಕೆ ಕೇವಲ ಒಂದು ಸಾರಿ ಮಾತ್ರ ಪನಾಮ ಕಾಲುವೆ ಯನ್ನು ದಾಟುತ್ತಿದ್ದರಿಂದ ಈ ಹಡಗಿಗೆ ಅದರ ಗಾತ್ರಕ್ಕೆ ಸಂಬಂಧಿಸಿದ ನಿರ್ಬಂಧವನ್ನು ಹೇರಲಿಲ್ಲ. ಒಂದು ದೊಡ್ದ ಪ್ಯಾಸೇಂಜರ್ ಸಾಮರ್ಥ್ಯದ ಪರವಾಗಿ ಅನುಕೂಲಕರವಾದ ಸಾಂಧರ್ಬಿಕ ಮಾರ್ಗವನ್ನು ಬಿಡಲು ಕುನಾರ್ಡ್ ನಿರ್ಧರಿಸಿತು.[೨೬] ಒಳಾಂಗಣಬಹುತೇಕ ಆಧುನಿಕ ಪ್ಯಾಸೇಂಜರ್ ಹಡಗುಗಳಲ್ಲಿರುವಂತೆ, ಕ್ವೀನ್ ಮೇರಿ ೨ ಯಲ್ಲಿರುವ ಪ್ರಮುಖ ಸಾರ್ವಜನಿಕ ಕೊಠಡಿಗಳಲ್ಲಿ ಅನೇಕವು ಹಡಗಿನ ಕೆಳ ಡೆಕ್‌ಗಳಲ್ಲಿ ಇದ್ದು, ಪ್ರಯಾಣಿಕರ ಕ್ಯಾಬೀನುಗಳನ್ನು ಮೇಲೆ ಇರಿಸಲಾಗಿದೆ.[೨೭] ಇದು ಸಾಂಪ್ರದಾಯಿಕ ಸಮುದ್ರಯಾನ ಹಡಗುಗಳ ಅಭ್ಯಾಸಕ್ಕೆ ವಿರುದ್ಧವಾಗಿತ್ತು, ಆದರೆ ಇದರ ವಿನ್ಯಾಸವು ಬಲವಾದ ಹಡಗಿನ ಹೊದಿಕೆಯಲ್ಲಿ ದೊಡ್ದ ಕೋಣೆಗಳು ಇರುವುದಕ್ಕೆ ಅನುವು ಮಾಡಿಕೊಟ್ಟಿತ್ತು, ಅಷ್ಟೆ ಅಲ್ಲದೆ ಹಡಗಿನ ಮೇಲ್ಭಾಗದಲ್ಲಿ ಹೆಚ್ಚಿನ ಪ್ರಯಾಣಿಕರಿಗೆ ಖಾಸಗಿ ಬಾಲ್ಕನಿಗಳು ಇದ್ದು, ಅತಿ ದೊಡ್ದ ಅಲೆಗಳ ಯಾವುದೇ ತೊಂದರೆಯಿಂದ ಮುಕ್ತವಾಗಿದ್ದವು. ಪೈನ್‌ರವರು ಡೆಕ್‌ಗಳ ಎರಡು ಪ್ರಮುಖ ಸಾರ್ವಜನಿಕ ಕೊಠಡಿಗಳಿಗೆ( ನಾರ್ಮಾಂಡಿ ಯ ಶೈಲಿಯಲ್ಲಿ ), ಒಂದು ಮಧ್ಯ ಅಕ್ಷೆಯನ್ನು ರೂಪಿಸುವ ಉದ್ದೇಶ ಹೊಂದಿದ್ದರು, ಆದರೆ ಒಂದು ಸಂಪೂರ್ಣ ನೀಳ ನೋಟವು ಹಡಗಿನಲ್ಲಿನ ಅನೇಕ ಕೋಣೆಗಳಿಂದ ಒಡೆಯಲ್ಪಟ್ಟಿತು. ಸ್ಟರ್ನ್‌ಗೆ ನೇರವಾಗಿ ಅಲ್ಲದೇ ಇದ್ದರೂ ಹಡಗಿನ ಇನ್ನೊಂದು ಹಿಂಭಾಗದಲ್ಲಿ ಭೋಜನದ ಕೋಣೆಗಳನ್ನು ನಿರ್ಮಿಸಲಾಗಿತ್ತು, ಹಡಗಿನ ಮಂದಿನ ಮತ್ತು ಹಿಂಭಾಗದಲ್ಲಿ ಮಾಡಿರುವ ಪಿಚಿಂಗ್ ಅತ್ಯಂತ ಗಮನಾರ್ಹವಾದುದು ಹಾಗೂ ಹೆಚ್ಚಿನ ವೇಗದಲ್ಲಿರುವಾಗ ಉಂಟಾಗುವ ಕಂಪನಗಳು ಉಪಹಾರ ಸೇವಿಸುತ್ತಿರುವ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡಬಹುದಾಗಿದ್ದವು.[೨೮] ಡೆಕ್ ೨, ಹಡಗಿನ ಅತ್ಯಂತ ಕೆಳಗಿನ ಡೆಕ್ ಆಗಿದ್ದು, ಪ್ರಕಾಶಮಾನವಾದ ಚಲನಚಿತ್ರ ಮಂದಿರಗಳು, ತಾರಾಲಯ (ಸಮುದ್ರದಲ್ಲೇ ಪ್ರಪ್ರಥಮ) [೨೯] ರಾಯಲ್ ಕೋರ್ಟ್ ಥಿಯೇಟರ್; ಗ್ರಾಂಡ್ ಲೊಬ್ಬಿ, " ಎಂಪೈರ್ ಕ್ಯಾಸಿನೋ"; ಗೋಲ್ಡನ್ ಲಯನ್ ಕ್ಲಬ್"; ಮತ್ತು ಬ್ರಿಟಾನಿಯಾ ರೆಸ್ಟೊರೆಂಟ್ ನ ಕೆಳಭಾಗವನ್ನು ಹೊಂದಿದೆ. ಡೆಕ್ ೩ ಇಲ್ಯೂಮಿನೇಷನ್ ಗಳ ಮೇಲಿನ ಹಂತಗಳನ್ನು ಹೊಂದಿದ್ದು, ರಾಯಲ್ ಕೋರ್ಟ್ ಥಿಯೇಟರ್ ಮತ್ತು ಬ್ರಿಟಾನಿಯಾ ರೆಸ್ಟೊರೆಂಟ್ ಹಾಗೂ ಒಂದು ಸಣ್ಣ ಶಾಪಿಂಗ್ ಆರ್ಕೆಡ್," ವೀವ್ ಶಾಂಪೇನ್ ಬಾರ್ ", ಚಾರ್ಟ್ ರೂಮ್, ಸರ್ ಸಾಮುವೇಲ್ಸ್ ವೈನ್ ಬಾರ್, ದಿ " ಕ್ವೀನ್ ರೂಮ್" ಮತ್ತು "G೩೨" ರಾತ್ರಿ ಕ್ಲಬ್ ಗಳು ಇಲ್ಲಿವೆ. ಇನ್ನೊಂದು ಪ್ರಮುಖ ಸಾರ್ವಜನಿಕ ಡೆಕ್ ಎಂದರೆ ಡೆಕ್ ೭, ಇದರಲ್ಲಿ," ಕ್ಯಾನಿಯನ್ ರಾಂಚ್ ಸ್ಪಾ", " ವಿಂಟರ್ ಗಾರ್ಡನ್", "ಕಿಂಗ್ಸ್ ಕೋರ್ಟ್", "ದಿ ಕ್ವೀನ್ಸ್ ಗ್ರಿಲ್ ಲೌಂಜ್" ಮತ್ತು ಅತಿ ಹೆಚ್ಚು ದರವನ್ನು ನೀಡುವ ಪ್ರಯಾಣಿಕರಿಗಾಗಿ ದಿ "ಕ್ವೀನ್ಸ್ ಗ್ರಿಲ್ " ಮತ್ತು " ಪ್ರಿನ್ಸೆಸ್ ಗ್ರಿಲ್" ರೆಸ್ಟೋರೆಂಟ್ ಗಳು ಇವೆ. ಡೆಕ್ ೮ ರಲ್ಲಿರುವ ಕೊಠಡಿಗಳೆಂದರೆ à la carte ಟೋಡ್ ಇಂಗ್ಲೀಷ್ ರೆಸ್ಟೋರೆಂಟ್,[೨೯] ೮,೦೦೦ ಪುಸ್ತಕಳಿರುವ ಒಂದು ಗ್ರಂಥಾಲಯ,[೩೦] ಒಂದು ಪುಸ್ತಕ ಮಳಿಗೆ ಮತ್ತು ಕ್ಯಾನಿಯನ್ ರಾಂಚ್ ಸ್ಪಾ ನ ಮೇಲ್ಭಾಗ. ಮತ್ತು ಹಡಗಿನ ಹಿಂಭಾಗದ ಡೆಕ್ ೮ ರಲ್ಲೂ ಸಹ ಒಂದು ದೊಡ್ಡ ಕೊಳ ಮತ್ತು ಮಳಿಗೆ ಇವೆ.[೨೭] ಡೆಕ್ ೧೨ ಸ್ಟಾರ್ಟ್ ಬೋರ್ಡ್‌ನ ಹಿಂಭಾಗದಲ್ಲಿ ನಾಯಿ ಕೊಟ್ಟಿಗೆಗಳು ಇದ್ದು, ಕೇವಲ ಅಟ್ಲಾಂಟಿಕ್‍ಗಳನ್ನು ದಾಟುವಾಗ ಮಾತ್ರ ಲಭ್ಯವಾಗುತ್ತವೆ. ಇವು ಸುಮಾರು ಹನ್ನೆರಡು ನಾಯಿಗಳು ಹಾಗೂ ಆರು ಬೆಕ್ಕುಗಳನ್ನು ಚಿಕ್ಕ ಮತ್ತು ದೊಡ್ದ ಪಂಜರಗಳಲ್ಲಿ ಇಡುವಷ್ಟು ಸ್ಥಳಾವಕಾಶವನ್ನು ಕಲ್ಪಿಸುತ್ತವೆ.[೩೧] ![]() ಹಡಗಿನಲ್ಲಿರುವ ಕಿಂಗ್ಸ್ ಕೋರ್ಟ್ ಏರಿಯಾ ದಿನದ ಇಪ್ಪತ್ತ ನಾಲ್ಕು ಗಂಟೆಗಳೂ ತೆರೆದಿದ್ದು, ಬೆಳಗಿನ ಉಪಹಾರ ಮತ್ತು ಮಧ್ಯಾನದ ಭೋಜನಕ್ಕೆ ಸ್ವಯಂ ಸೇವಾ ಪದ್ದತಿಯ ಸೌಲಭ್ಯಗಳನ್ನು ನೀಡುತ್ತದೆ. ಇಡೀ ಸ್ಥಳಾವಕಾಶವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದು ವಲಯವನ್ನೂ ನಾಲ್ಕು ಪ್ರತ್ಯೇಕ ಪರ್ಯಾಯ ಉಪಹಾರಗಳಿಗೆ ಅನುಸಾರವಾಗಿ ಪ್ರತಿ ಸಂಜೆ ದೀಪಗಳು, ಮೇಜಿನ ಹೊದಿಕೆಗಳು ಮತ್ತು ಮೆನು ಗಳಿಂದ ಅಲಂಕರಿಸಲಾಗುತ್ತದೆ. ಏಷ್ಯಿಯಾದ ಪಾಕ ಶಾಸ್ತ್ರದ ವಿಶೇಷತೆಯನ್ನು ಹೊಂದಿರುವ ಲೋಟಸ್; ಬ್ರಿಟೀಷ್ ಶೈಲಿಯ ಗ್ರಿಲ್ಲಿಯನ್ನು ಹೊಂದಿರುವ ಕಾರ್ವೆರಿ; ಇಟಲಿ ಆಹಾರ ವಿಶೇಷವಾದ ಲಾ ಪಿಸ್ಸಾ; ಮತ್ತು ಚೆಫ್ಸ್ ಗ್ಯಾಲ್ಲಿ, ಮುಂತಾದ ಆಹಾರ ಪದಾರ್ಥಗಳನ್ನು ನೀಡುವ ವ್ಯವಸ್ಥೆಯನ್ನು ಹೊಂದಿದೆ..೨/}[೩೨] ಪ್ರಯಾಣಿಕರು ಯಾವ ವರ್ಗದ ವಸತಿ ವ್ಯವಸ್ಥೆಯಲ್ಲಿ ತಾವು ಪ್ರಯಾಣಿಸಲು ಇಚ್ಚಿಸುತ್ತಾರೆ ಎಂಬುದನ್ನು ಕೇಳಲಾಗುತ್ತದೆ. ಬಹುತೇಕ ಪ್ರಯಾಣಿಕರು ( ಸುಮಾರು ೮೫% ರಷ್ಟು) ಬ್ರಿಟಾನಿಯಾ ವರ್ಗವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ (ಆದ್ದರಿಂದ ಮುಖ್ಯ ರೆಸ್ಟೊರೆಂಟ್ ನಲ್ಲಿ ಉಪಹಾರ ಸೇವಿಸುತ್ತಾರೆ) ಆದರೆ ಪ್ರಯಾಣಿಕರು ಜೂನಿಯರ್ ಸುಟ್ ( ಮತ್ತು "ಪ್ರಿನ್ಸೆಸ್ ಗ್ರಿಲ್ ನಲ್ಲಿ ಉಪಹಾರ ಸೇವಿಸುವುದು) ಅಥವಾ ಸುಟ್ ( ಮತ್ತು ಕ್ವೀನ್ಸ್ ಗ್ರಿಲ್ ನಲ್ಲಿ ಉಪಹಾರ ಸೇವಿಸುವುದು)ನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.[೩೩][೩೪] ಈ ಎರಡನೇ ವರ್ಗದಲ್ಲಿ ಇರುವ ಪ್ರಯಾಣಿಕರನ್ನು ಕುನಾರ್ಡ್ " ಗ್ರಿಲ್ ಪ್ರಯಾಣಿಕರು" ಎಂದು ಗುಂಪು ಮಾಡುತ್ತದೆ ಮತ್ತು ಅವರು "ಕ್ವೀನ್ಸ್ ಗ್ರಿಲ್ ಲೌಂಜ್ ನ್ನು ಬಳಸುವುದಕ್ಕೆ ಅನುಮತಿ ನೀಡಲಾಗುತ್ತದೆ ಹಾಗೂ ೧೧ನೇ ಡೆಕ್ ನಲ್ಲಿ ಒಂದು ಖಾಸಗಿ ಹೊರಾಂಗಣವಿದ್ದು ತನ್ನದೇ ಆದ ಈಜು ಕೊಳವನ್ನು ಹೊಂದಿದೆ.[೨೭][೩೫] ಈ ಲಕ್ಷಣವನ್ನು ಕ್ವೀನ್ ವಿಕ್ಟೋರಿಯಾ ಮತ್ತು ಕ್ವೀನ್ ಎಲಿಜಬೆತ್ ನಲ್ಲೂ ಸಹ ಕಾಣಬಹುದು. ಆದರೆ, ಇತರ ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ಎಲ್ಲಾ ಪ್ರಯಾಣಿಕರು ಬಳಸಬಹುದು. [೩೬] ಬ್ರಿಟಾನಿಯಾ ರೆಸ್ಟೊರೆಂಟ್ ಎರಡು ಡೆಕ್ ಗಳಲ್ಲಿ ಹಡಗಿನ ಸಂಪೂರ್ಣ ಅಗಲವನ್ನು ಆಕ್ರಮಿಸುವುದರಿಂದ, ಪ್ರಯಾಣಿಕರು ಭೋಜನದ ಕೋಣೆಯನ್ನು ಹಾದುಹೋಗದೇ ಮುಖ್ಯ ಸಭಾಂಗಣದಿಂದ ಕ್ವೀನ್ಸ್ ಕೋಣೆಗೆ ಹೋಗಲು ಎರಡೂ ಡೆಕ್ಗಳ ನಡುವೆ ಡೆಕ್ ೩L ನ್ನು ನಿರ್ಮಿಸಲಾಗಿದೆ. ೩ ನೇ ಡೆಕ್‌ನಲ್ಲಿರುವ ರೆಸ್ಟೊರೆಂಟ್ನ ಬಾಲ್ಕನಿಯ ಕೆಳ ಭಾಗದಲ್ಲಿ ಹಾಗೂ ೨ನೇ ಡೆಕ್ನ ಪ್ರಮುಖ ಸ್ಥಳದ ಮೇಲ್ಬಾಗದಲ್ಲಿ ಎರಡು ಮೊಗಸಾಲೆಗಳಿವೆ. ಈ ಕಾರಣದಿಂದ ಬ್ರಿಟಾನಿಯಾದ ಬಾಲ್ಕನಿ ಹಡಗಿನ ಹೊದಿಕೆಯ ಮೇಲೆ ಹತ್ತಿ ಹೋಗಲು ಅಂತಸ್ತುಗಳನ್ನು ಹೊಂದಿದೆ. ಮುಖ್ಯ ರೆಸ್ಟೋರೆಂಟ್ ಇರುವ ಪ್ರದೇಶದಲ್ಲಿ ಕಿಟಕಿಯ ಮೂರು ಸಾಲುಗಳಿದ್ದು ಈ ವ್ಯವಸ್ಥೆಗೆ ಉದಾಹರಣೆಯಂಬಂತಿದೆ, ಇವುಗಳಲ್ಲಿ ಮೇಲಿನ ಎರಡು ಸಾಲುಗಳು ಮತ್ತು ಅತ್ಯಂತ ಕೆಳಗಿನ ಸಾಲು ಭೋಜನದ ಕೋಣೆಗೆ ಬೆಳಕನ್ನು ಕೊಡುತ್ತದೆ, ಆದರೆ ಮಧ್ಯದ ಸಾಲು ಡೆಕ್ ೩L ಗೆ ಬೆಳಕನ್ನು ನೀಡುತ್ತದೆ. ರಾಯಲ್ ಕೋರ್ಟ್ ಥಿಯೇಟರ್ ನಲ್ಲೂ ಇಂತಹದ್ದೇ ವ್ಯವಸ್ಥೆಯನ್ನು ಕಾಣಬಹುದು. ಅದೇ ರೀತಿಯಲ್ಲಿ, ಡೆಕ್ ೩ ರ ಎರಡೂ ಬದಿಗಳಲ್ಲಿ ಇರುವ ಹಾದಿಗಳು ಮುಂದುವರೆದು ಪ್ರವೇಶ ದ್ವಾರದಲ್ಲಿನ ಬೆಳಕು ಮತ್ತು ಕೋಣೆಯು ಮುಂಭಾಗದಲ್ಲಿರುವ ಎಲೆವೇಟರ್ನ ನಡುವೆ ಆಗುವ ಡೆಕ್ ಎಲೆವೇಟರ್ ಬದಲಾವಣೆಯನ್ನು ಸರಿದೂಗಿಸುತ್ತದೆ.[೨೭] ಕ್ವೀನ್ ಮೇರಿ೨ ಯ ಸಾರ್ವಜನಿಕ ಕೊಠಡಿಗಳು, ಮೊಗಸಾಲೆಗಳು, ಸ್ಟೇಟ್ ರೂಮ್ ಗಳು ಮತ್ತು ಸಭಾಮಂಟಪಗಳಲ್ಲಿ ೫೦೦೦ ಕ್ಕಿಂತಲೂ ಹೆಚ್ಚು ಕುಶಲ ಕೆಲಸಗಳು ಎದ್ದು ಕಾಣುತ್ತವೆ, ಇವು ಹದಿನಾರು ವಿಭಿನ್ನ ರಾಷ್ಟ್ರಗಳಿಂದ ಆಗಮಿಸಿದ ಸುಮಾರು ೧೨೮ ಕುಶಲ ಕರ್ಮಿಗಳಿಂದ ರಚಿತವಾಗಿವೆ. ಬಾರ್ಬಾರ ಬ್ರೋಕ್ ಮಾನ್ಸ್ ನ ಚಿತ್ರ ಜವನಿಕೆಯಲ್ಲಿ ಗಮನಿಸಲೇ ಬೇಕಾದ ಎರಡು ಪ್ರಮುಖ ಅಂಶಗಳೆಂದರೆ, ಸಮುದ್ರಯಾನ ಹಡಗಿನ ಸೇತುವೆಯ ಅಮೂರ್ತ ಚಿತ್ರಣ ಹಾಗೂ ಬ್ರಿಟಾನಿಯಾ ರೆಸ್ಟೊರೆಂಟ್ ನ ಸಂಪೂರ್ಣ ಎತ್ತರವನ್ನು ಆಕ್ರಮಿಸಿರುವ ನ್ಯೂಯಾರ್ಕ್ ಸ್ಕೈ ಲೈನ್ ಮತ್ತು ಮೂಲ ಕ್ವೀನ್ ಮೇರಿ ಯ ಪ್ರಧಾನ ಭೋಜನಾಲಯದಲ್ಲಿ ಕಂಡು ಬರುವ ಆರ್ಟ್ ಡೆಕೋ ನಿಂದ ಸ್ಪೂರ್ತಿ ಪಡೆದ ಪ್ರಧಾನ ಸಭಾಂಗಣದಲ್ಲಿರುವ ಜಾನ್ ಮೆಕ್ ಕೆನ್ನಾ ದ ಕಂಚಿನ ಹಾಳೆಯಲ್ಲಿರುವ ಗೋಡೆಯ ಮೇಲಿನ ಭಿತ್ತಿ ಚಿತ್ರ.[೩೭] ತಾಂತ್ರಿಕವಿದ್ಯುತ್ ಘಟಕ ಮತ್ತು ಚಾಲನಾ ವ್ಯವಸ್ಥೆಕ್ವೀನ್ ಮೇರಿ ೨ 'ವಿದ್ಯುತ್ ಘಟಕವು ನಾಲ್ಕು ಹದಿನಾರು ಸಿಲಿಂಡರ್ ಗಳು ವಾರ್ಟಿಸಿಲಾ ೧೬V೪೬CR ಎನ್ವಿರೋ ಎಂಜಿನ್ ಮರೈನ್ ಡೀಸಲ್ ಎಂಜಿನ್ ಗಳನ್ನು ಹೊಂದಿದ್ದು ಒಟ್ಟಿಗೆ67,200 kW (90,100 hp)೫೧೪ rpm ನ್ನು ಉತ್ಪಾದಿಸುತ್ತವೆ, ಇದರೊಂದಿಗೆ ಎರಡುಸಾಮಾನ್ಯ ಎಲೆಕ್ಟ್ರಿಕ್ LM2500+ ಅನಿಲ ಟರ್ಬೈನ್ ಗಳು ಒಟ್ಟಿಗೆ ಕಾರ್ಯ ನಿರ್ವಹಿಸುತ್ತವೆ50,000 kW (67,000 hp). ಇಂತಹ ಸಂಯೋಜಿತ ವ್ಯವಸ್ಥೆಯನ್ನು CODLAG ( ಕಂಬೈನ್ಡ್ ಡೀಸಲ್ ಎಲೆಕ್ಟ್ರಿಕ್ ಅಂಡ್ ಗ್ಯಾಸ್ ಟರ್ಬೈನ್) ಎನ್ನುವರು, ಇದು ಕಡಿಮೆ ವೇಗದಲ್ಲಿ ಉತ್ತಮ ಆರ್ಥಿಕ ಪ್ರಯಾಣವನ್ನು ನೀಡುವುದಲ್ಲದೆ ಅಗತ್ಯವಾದಾಗ ಅಧಿಕ ವೇಗದಲ್ಲಿ ಚಲಿಸುವುದಕ್ಕೂ ಅನುಕೂಲಕರವಾಗಿದೆ ಮತ್ತು ಕೆಲವು ವೇಳೆ ಸಮುದ್ರ ಯಾನ ಹಡಗುಗಳಲ್ಲಿನ ಸಹಜತೆಯನ್ನೂ ಇವುಗಳಲ್ಲಿ ಕಾಣಬಹುದಾಗಿದೆ.[೧೨] ಆದರೆ ಕ್ವೀನ್ ಮೇರಿ ೨ CODLAG ನೂಕು ಬಲದ ಲಕ್ಷಣವನ್ನು ಹೊಂದಿರುವ ಮೊದಲನೇ ಪ್ಯಾಸೇಂಜರ್ ಹಡಗು ಆಗಿದೆ, ಮತ್ತು ೧೯೭೭ರಲ್ಲಿ ನಿರ್ಮಿತವಾದ ಫಿನಿಷ್ ಫೆರ್ರಿ ಫಿನಿಜೆಟ್ ನಂತರದ ಮೊದಲನೇ ಅನಿಲ ಟರ್ಬೈನ್ ಚಾಲಿತ ಹಡಗು ಇದಾಗಿದೆ.[೩೮] ಮತ್ಸ್ಯ ಪಾಡ್‌ಗಳಿಂದ ಉಂಟಾದ ನಾಲ್ಕು ರೋಲ್ಸ್ -ರಾಯ್ಸ್ ನೂಕು ಘಟಕಗಳು ಮೇಲ್ಮುಖ ಒತ್ತಡವನ್ನು ಒದಗಿಸುತ್ತವೆ, ಇವುಗಳಲ್ಲಿ ಪ್ರತಿಯೊಂದು ಪ್ರತ್ಯೇಕವಾಗಿ ಹೊಂದಿಸಿದ ಬ್ಲೇಡ್ ಗಳು ಇರುವ ಕಡಿಮೆ ಕಂಪನವಿರುವ ಕಮೇವಾ ಚಾಲಕವನ್ನು ಹೊಂದಿವೆ. ಬ್ರಿಡ್ಜ್ ಪರದೆಯ ಮುಂಭಾಗದಲ್ಲೇ ಅಂದರೆ ಡೆಕ್ ನ ಸ್ವಲ್ಪ ಹಿಂಭಾಗದಲ್ಲಿ ಕ್ವೀನ್ ಮೇರಿ೨ ಎಂಟು ಹೆಚ್ಚುವರಿ ಬ್ಲೇಡ್ ಗಳನ್ನು ಹೊಂದಿದೆ. ಮುಂಭಾಗದ ಜೋಡಿಯನ್ನು ಸ್ಥಿರವಾಗಿ ಬಿಗಿ ಗೊಳಿಸಲಾಗಿದೆ, ಆದರೆ ಹಿಂಭಾಗದ ಜೋಡಿಯನ್ನು ಚುಕ್ಕಾಣಿಯನ್ನು ತೆಗೆಯಲು ಅನುಕೂಲವಾಗುವಂತೆ ೩೬೦° ಯಲ್ಲಿ ತಿರುಗು ವಂತೆ ಮಾಡಬಹುದಾಗಿದೆ.[೧೨] ೧೯೬೧ರಲ್ಲಿ ನಿರ್ಮಿಸಲಾದ SSಫ್ರಾನ್ಸ್ ನ ನಂತರ ಕ್ವೀನ್ ಮೇರಿ ೨ ನಾಲ್ಕು ಪಟ್ಟು ನೂಕು ಬಲವನ್ನು ಹೊಂದಿರುವ ಮೊದಲನೇ ಪ್ಯಾಸೇಂಜರ್ ಹಡಗು ಆಗಿ ನಿರ್ಮಾಣಗೊಂಡಿದೆ.[೩೯] ![]() ಬಹುತೇಕ ಆಧುನಿಕ ಹಡಗುಗಳಲ್ಲಿ ಇದ್ದಂತೆ, ಕ್ವೀನ್ ಮೇರಿಯ ನೂಕು ಬಲ ಯಾಂತ್ರಿಕತೆಯು ಅದರ ಚಾಲಕಗಳಿಂದ ವಿದ್ಯುತ್ ಶಕ್ತಿಯ ಮೂಲಕ ಯುಗ್ಮ ರಹಿತಗೊಳ್ಳುತ್ತದೆ ಮತ್ತು ಆದ್ದರಿಂದ ಅದರ ಚಾಲಿತ ವ್ಯವಸ್ಥೆಯನ್ನು "CODLAG ಎಲೆಕ್ಟ್ರಿಕ್ "( ಟರ್ಬೋ -ಎಲೆಕ್ಟ್ರಿಕ್ ಮತ್ತು ಡೀಸಲ್ ಎಲೆಕ್ಟ್ರಿಕ್) ಎಂದು ವಿವರಿಸಲಾಗಿದೆ. ಡೀಸಲ್ ಎಂಜಿನ್ ಗಳು ಮತ್ತು ಅನಿಲ ಟರ್ಬೈನ್ ಗಳು ವಿದ್ಯುಜನಕಗಳು ತಿರುಗುವಂತೆ ಮಾಡುತ್ತವೆ, ಇದು ಪಾಡೆಡ್ ಚಾಲಕಗಳ ಒಳಗಿರುವ ನಾಲ್ಕು 21,500 kW (28,800 hp) ಆಲ್‌ಸ್ಟಮ್ ವಿದ್ಯುತ್ ಮೋಟಾರ್ ಗಳು (ಇದರಿಂದ ಹಡಗಿನ ಇಡೀ ಹೊದಿಕೆ) ಚಲಿಸುವಂತೆ ಮಾಡುತ್ತದೆ.[೧೨] ಸಾಮಾನ್ಯವಾಗಿ, ಕ್ವೀನ್ ಮೇರಿ೨ 'ಯ ಅನಿಲ ಟರ್ಬೈನ್ ಗಳನ್ನು ಅದರ ಡೀಸಲ್ ಗಳೊಂದಿಗೆ ಹೊದಿಕೆಯ ಆಳದಲ್ಲಿ ಎಂಜಿನ್ ಕೋಣೆ ಯಲ್ಲಿ ಇರಿಸಲಾಗುವುದಿಲ್ಲ, ಆದರೆ ಅದಕ್ಕೆ ಬದಲಾಗಿ ಹೊಗೆ ಕೊಳವೆಯ ಕೆಳಭಾಗದಲ್ಲಿ ಒಂದು ಶಬ್ದ ನಿರೋಧಕ ಕೋಣೆಯಲ್ಲಿ ಇರಿಸಲಾಗಿರುತ್ತದೆ. ಈ ವ್ಯವಸ್ಥೆಯು ಹಡಗು ವಿನ್ಯಾಸಕಾರರಿಗೆ ಆಕ್ಸಿಜನ್ ಅಗತ್ಯವಿರುವ ಟರ್ಬೈನ್ ಗಳಿಗೆ ಹಡಗಿನ ಎತ್ತರಕ್ಕೂ ನಳಿಕೆಗಳ ಮೂಲಕ ಗಾಳಿಯನ್ನು ಕಳುಹಿಸುವುದಕ್ಕೆ ಬದಲಾಗಿ, ನೇರವಾಗಿ ಗಾಳಿಯ ಸರಬರಾಜನ್ನು ಮಾಡುವಂತೆ ಸಹಾಯಮಾಡಿತು, ಇದರಿಂದ ಅಮೂಲ್ಯವಾದ ಒಳ ಅವಕಾಶವು ನಷ್ಟವಾಗುವುದನ್ನು ತಡೆಯಲು ಸಹಾಯ ಮಾಡಿತು.[೧೨] ನೀರು ಸರಬರಾಜುಲವಣ ರಹಿತ ನೀರು ಕ್ವೀನ್ ಮೇರಿ೨ ಗೆ ಮೂರು ಸಮುದ್ರ ನೀರಿನ ಲವಣ ರಹಿತ ಘಟಕಗಳಿಂದ ಸರಬರಾಜಾಗುತ್ತದೆ. ಪ್ರತಿ ದಿನಕ್ಕೆ 630,000 litres (170,000 US gal) ರಷ್ಟು ಸಾಮರ್ಥ್ಯವನ್ನು ಹೊಂದಿರುವ, ಪ್ರತಿಯೊಂದು ಘಟಕವೂ ಮಲ್ಟಿ ಪಲ್ ಎಫೆಕ್ಟ್ ಪ್ಲೇಟ್ (MEP) ಭಟ್ಟಿ ಇಳಿಸುವಿಕೆ ತಂತ್ರ ಜ್ಞಾನವನ್ನು ಬಳಸಿಕೊಳ್ಳುತ್ತದೆ. ಘಟಕಗಳಿಗೆ ಬೇಕಾಗುವ ಶಕ್ತಿಯು ಹಡಗಿನ ಅನಿಲ ಟರ್ಬೈನ್‌ಗಳು ಮತ್ತು ಡೀಸಲ್ ಎಂಜಿನ್ ಗಳಿಂದ ಬರುವ ಹಬೆ ಮತ್ತು ತಂಪಾದ ನೀರಿನಿಂದ ದೊರೆಯುತ್ತದೆ ಅಥವಾ ಮತ್ತೂ ಅಗತ್ಯವಾದರೆ ತೈಲ ದಹನ ಬಾಯ್ಲರ್ ಗಳಿಂದ ಬರುವ ಹಬೆಯಿಂದ ಪಡೆಯುತ್ತವೆ. ಸಾಂಪ್ರದಾಯಿಕ ಬಹುಪಯೋಗಿ- ಪರಿಣಾಮ ಭಟ್ಟಿ ಇಳಿಸುವಿಕೆ ತಂತ್ರ ಜ್ಞಾನವು ಹಡಗಿನ ಘಟಕದಲ್ಲಿ ಸುಧಾರಣೆಯನ್ನು ತಂದಿದೆ, ಇದರ ಮೂಲಕ ಪ್ಲೇಟ್ ಗಳ ಸ್ಕೇಲಿಂಗ್ನ್ನು ಕಡಿಮೆಮಾಡಿ, ಅವಶ್ಯ ನಿರ್ವಹಣೆಯನ್ನು ಕಡಿಮೆಗೊಳಿಸಲು ಸಾಧ್ಯವಾಗಿದೆ. ಲವಣ ರಹಿತ ನೀರು ಪ್ರತಿ ಮಿಲಿಯನ್ ಗೆ ಐದು ಭಾಗಗಳಂತೆ ಅತ್ಯಂತ ಕಡಿಮೆ ಅವಣಾಂಶವನ್ನು ಹೊಂದಿರುತ್ತದೆ. ಇನ್ನೂ ಹೆಚ್ಚುವರಿ ಸಾಮರ್ಥ್ಯವಿರುವಂತೆ ಪ್ರತಿ ದಿನಕ್ಕೆ 1,890,000 litres (500,000 US gal) ಲೀಟರ್ ಸಾಮರ್ಥ್ಯದಂತೆ 1,100,000 litres (290,000 US gal) ರಷ್ಟು ಒಟ್ಟು ಸರಾಸರಿ ನೀರನ್ನು ಉತ್ಪಾದಿಸುತ್ತದೆ. ಮೂರು ಘಟಕಗಳಲ್ಲಿ ಕೇವಲ ಎರಡರಿಂದ ಹಡಗಿಗೆ ಸಾಕಾಗುವಷ್ಟು ಸರಬರಾಜು ದೊರೆಯುತ್ತದೆ.[೪೦] ಕುಡಿಯುವ ನೀರಿನ ಟ್ಯಾಂಕ್‌ಗಳು 3,830,000 litres (1,010,000 US gal) ಸಾಮರ್ಥ್ಯವನ್ನು ಹೊಂದಿದ್ದು, ಮೂರು ದಿನಗಳಿಗಿಂತ ಹೆಚ್ಚು ಸಾಕಾಗುವಷ್ಟು ನೀರನ್ನು ಸಂಗ್ರಹಿಸುತ್ತವೆ.[೪೧] ಎಂಜಿನ್‌ಗಳು ಕಡಿಮೆ ಭಾರದಲ್ಲಿ ( ಹಡಗು ಕಡಿಮೆ ವೇಗದಲ್ಲಿ ಚಲಿಸುವಾಗ) ಕಾರ್ಯ ನಿರ್ವಹಿಸುವಾಗ ಡೀಸಲೈನೇಶನ್ ಘಟಕಗಳು ಕೆಲಸ ಮಾಡಲು ಬೇಕಾಗುವಷ್ಟರ ಮಟ್ಟಿಗೆ ಸಮುದ್ರದ ನೀರನ್ನು ಕಾಯಿಸಲು ಎಂಜಿನ್ ಜಾಕೆಟ್ ನೀರಿನ ಉಷ್ಣತೆಯು ಸಾಕಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ, ಸಮುದ್ರದ ನೀರನ್ನು ಬಿಸಿ ಮಾಡಲು ತೈಲ ದಹನ ಬಾಯ್ಲರ್‌ಗಳನ್ನು ಉಪಯೋಗಿಸಲಾಗುತ್ತದೆ. ಈ ರೀತಿಯಲ್ಲಿ ಹಬೆಯನ್ನು ಉತ್ಪಾದಿಸುವ ಪ್ರಕ್ರಿಯೆಯು ದುಬಾರಿಯಾದದ್ದರಿಂದ ಆರ್ಥಿಕವಾಗಿ ಅಷ್ಟು ಅನುಕೂಲವಲ್ಲ. ಆದ್ದರಿಂದ, ಇದನ್ನು ಹಡಗಿನಲ್ಲಿ ಉತ್ಪಾದಿಸುವುದಕ್ಕಿಂತ ಒಂದು ನಿರ್ಧಿಷ್ಟ ಬಂದರಿನಲ್ಲಿ ನೀರನ್ನು ಕೊಳ್ಳುವುದು ಅಗ್ಗ ವಾಗಬಹುದು. ಸಮುದ್ರದ ನೀರನ್ನು ಹಡಗಿನ ಒಳಕ್ಕೆ ತೆಗೆದುಕೊಳ್ಳಲು ಹಡಗಿನ ಹೊದಿಕೆಯಲ್ಲಿ ಒಳಹರಿವಿನ ಕೊಳವೆಗಳು ಇರುತ್ತವೆ. ಎಂಜಿನ್ ಗಳಿಂದ ಹೊರಬರುವ ತಂಪಾದ ನೀರಿನೊಂದಿಗೆ ಪ್ರಭಲ ಲವಣ ದ್ರಾವಣ ( ಬ್ರೈನ್) ವನ್ನು ಹಡಗಿನ ಸ್ಟರ್ನ್ ನ ಹತ್ತಿರದಿಂದ ಸಮುದ್ರಕ್ಕೆ ಬಿಡಲಾಗುತ್ತದೆ.[೪೨] ಸೇವೆಯ ಇತಿಹಾಸ![]() ೧೨ ಜನವರಿ ೨೦೦೪ ರಂದು ಕ್ವೀನ್ ಮೇರಿ೨ ಸೌತ್ ಆಂಪ್ಟನ್ ಇಂಗ್ಲೆಂಡ್ ನಿಂದ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಫೋರ್ಟ್ ಲಾಡರ್ ಡೇಲ್, ಫ್ಲೋರಿಡಾ ಗೆ, ೨,೬೨೦ ಪ್ರಯಾಣಿಕರನ್ನು ಹೊತ್ತು ತನ್ನ ಚೊಚ್ಚಲ ಸಮುದ್ರಯಾನ ವನ್ನು ಆರಂಭಿಸಿತು. ಇದಕ್ಕೆ ಮೊದಲು ಕ್ವೀನ್ ಎಲಿಜಬೆತ್ ೨ ನ್ನು ಮುನ್ನಡೆಸಿದ್ದ ಕ್ಯಾಪ್ಟನ್ ವಾರ್ವಿಕ್ ರವರ ಸಾರಥ್ಯದಲ್ಲಿ ಈ ಯಾನ ಆರಂಭಗೊಂಡಿತು. ಹಿರಿಯ ಕುನಾರ್ಡ್ ಅಧಿಕಾರಿ ಮತ್ತು ಕ್ವೀನ್ ಎಲಿಜಬೆತ್೨ ನ ಮೊಟ್ಟ ಮೊದಲ ಕ್ಯಾಪ್ಟನ್ ಆದ ವಿಲಿಯಂ ( ಬಿಲ್) ವಾರ್ವಿಕ್ ರವರ ಮಗನೇ ವಾರ್ವಿಕ್. ಹಡಗು ತನ್ನ ಚೊಚ್ಚಲ ಸಮುದ್ರಯಾನದಿಂದ ಸೌತ್ ಆಂಪ್ಟನ್ ಗೆ ಆಗಮಿಸಿತು, ಈ ಸಮಯದಲ್ಲಿ ಪೋರ್ಚುಗಲ್ ನಲ್ಲಿ ಮುಚ್ಚಿಕೊಳ್ಳಲು ವಿಫಲವಾಗಿದ್ದ ಬೋ ಡೋರ್ ಗಳು ಹಾಗೆಯೇ ತೆರೆದುಕೊಂಡಿದ್ದವು.[೪೩] XXVIII ಒಲಿಂಪಿಕ್ಸ್ ಕ್ವೀನ್ ಮೇರಿ ೨ ಹಡಗು ಅಥೆನ್ಸ್‌ನಲ್ಲಿ ಪ್ರಾರಂಭವಾದ ಹಾಗೂಎರಡು ವಾರಗಳ ಕಾಲ ತೇಲುವ ಹೋಟೆಲ್ ಆಗಿದ್ದ ಇದನ್ನು ಪಿರೇಯಸ್ನಲ್ಲಿ ನಿಲ್ಲಿಸಲಾಯಿತು, ಇದರ ಸೇವೆಯು ಆಗಿನ ಯುಕೆ ಪ್ರಧಾನ ಮಂತ್ರಿಯಾಗಿದ್ದ ಟೋನಿ ಬ್ಲೇರ್ ಹಾಗೂ ಅವರ ಪತ್ನಿ ಚೆರೀ, ಫ್ರೆಂಚ್ ಅಧ್ಯಕ್ಷ ಜಾಕ್ವೆಸ್ ಚಿರಾಕ್, ಮಾಜಿ ಯುಎಸ್ ಅಧ್ಯಕ್ಷ ಜಾರ್ಜ್ ಎಚ್.ಡಬ್ಲು.ಬುಶ್, ಹಾಗೂ ಯುಎಸ್ ಒಲಿಂಪಿಕ್ ಪುರುಷರ ಬಾಸ್ಕೆಟ್‌ಬಾಲ್ ತಂಡಕ್ಕೆ ಕೂಡಾ ಲಭ್ಯವಾಯಿತು.[೪೪][೪೫] ಕ್ವೀನ್ ಮೇರಿ ೨ ' ಪ್ರಾರಂಭವಾದಾಗ ಅದರ ಮೊದಲ ಪ್ರಯಾಣಿಕರೆಂದರೆ ಕ್ವೀನ್ ಎಲಿಜಬೆತ್ II, ಡ್ಯೂಕ್ ಆಫ್ ಎಡಿನ್ಬರ್ಗ್ ಪ್ರಿನ್ಸ್ ಫಿಲಿಪ್, ಜಾಝ್ ಸಂಗೀತಗಾರ ಡೇವ್ ಬ್ರೂಬೆಕ್, ಹಾಸ್ಯ ನಟ ಜಾನ್ ಕ್ಲೀಸ್, ನಟ ರಿಚರ್ಡ್ ಡ್ರೆಫಸ್, ಲೇಖಕ ಮತ್ತು ಸಂಪಾದಕ ಹೆರಾಲ್ಡ್ ಎವಾನ್ಸ್, ನಿರ್ದೇಶಕ ಜಾರ್ಜ್ ಲ್ಯುಕಾಸ್, ಗಾಯಕ ಕಾರ್ಲಿ ಸಿಮನ್, ಗಾಯಕ ರಾಡ್ ಸ್ಟೀವರ್ಟ್, ಸಿಬಿಎಸ್ ಸಂಜೆ ವಾರ್ತಾವಾಚಕ ಕೇಟೀ ಕೌರಿಕ್, ಹಾಗೂ ಹಣಕಾಸು ತಜ್ಞ್ ಡೊನಾಲ್ಡ್ ಟ್ರಂಪ್.[೪೬] ೨೦೦೫ ರಲ್ಲಿ ಅಟ್ಲಾಂಟಿಕ್ ನ್ನು ದಾಟುವಾಗ ಕ್ವೀನ್ ಮೇರಿ೨ ಯ ಒಂದು ಬೀಗ ಹಾಕಿದ ಹಬೆ ಪೆಟ್ಟಿಗೆಯಲ್ಲಿ ಜೆ.ಕೆ. ರೋಲಿಂಗ್' ರವರ ಪುಸ್ತಕದ ಪ್ರಥಮ ಯು.ಎಸ್. ಪ್ರತಿಯಾದ ಹ್ಯಾರಿ -ಪಾಟರ್ ಅಂಡ್ ದಿ ಹಾಫ್ -ಬ್ಲಡ್ ಪ್ರಿನ್ಸ್ ಇರುವುದು ಕಂಡು ಬಂದಿತು. ಈ ಘಟನೆಯ ಒಂದು ಮುದ್ರಣಾ ಬಿಡುಗಡೆಯಲ್ಲಿ, ಕುನಾರ್ಡ್ ಮಾತನಾಡುತ್ತಾ (ಸರಿಯಾದ ಪರಿಶೀಲನೆಯನ್ನು ನಡೆಸದೇ ಇದ್ದರೂ) ಒಂದು ಸಮುದ್ರಯಾನದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪುಸ್ತಕವೊಂದು ಸಾಗಿಸಲ್ಪಟ್ಟಿದ್ದು ಇದೇ ಮೊದಲು ಎಂದು ಹೇಳಿದರು.[೪೭] ಜನವರಿ ೨೦೦೬ರಲ್ಲಿ ಕ್ವೀನ್ ಮೇರಿ ೨ ಪನಾಮ ಕಾಲುವೆಯ ಮೂಲಕ ಹಾದು ಹೋಗಲು ಹಡಗಿನ ಗಾತ್ರ ಬಹಳ ದೊಡ್ಡ ದಾಗಿದ್ದರಿಂದ ದಕ್ಷಿಣ ಅಮೇರಿಕಾವನ್ನು ಪ್ರದಕ್ಷಿಣೆ ಹಾಕಿ ಹೋಗಬೇಕಾಯಿತು. ಫೋರ್ಟ್ ಲಾಡರ್ ಡೇಲ್ ನ್ನು ಬಿಟ್ಟು ಹೊರಟಾಗ ಅದರ ಚಾಲಕ ಪಾಡ್ ಒಂದು ಕಾಲುವೆಯ ಗೋಡೆಗೆ ಬಡಿದಿದ್ದರಿಂದ ಹಾನಿಗೊಂಡಿತು, ಹಡಗನ್ನು ಕಡಿಮೆ ವೇಗದಲ್ಲಿ ನಡೆಸಲು ಒತ್ತಾಯ ಪಡಿಸಿದ್ದರಿಂದ, ರಿಯೂ ಡೆ ಜಾನೆರೊ ಗೆ ನಡೆಸಲು ಕಮ್ಯಾಂಡರ್ ವಾರ್ವಿಕ್ ಗೆ ಅನೇಕ ಕರೆಗಳು ಬಂದವು. ಕುನಾರ್ಡ್ ರವರು ಪ್ರಯಾಣದ ವೆಚ್ಚವನ್ನು ಹಿಂದಿರುಗಿಸುವ ಮೊದಲೇ ಅದರಲ್ಲಿದ್ದ, ಅನೇಕ ಪ್ರಯಾಣಿಕರಿಗೆ ಕುಳಿತಲ್ಲೇ ವಿರೋಧಿಸಲು ಅನೇಕ ತಪ್ಪಿದ ಕರೆಗಳು ಬಂದವು. ಕ್ವೀನ್ ಮೇರಿ೨ ಮಾತ್ರ ತನ್ನ ಕಡಿಮೆ ವೇಗದಲ್ಲಿ ಹೋಗುವುದನ್ನು ಮುಂದುವರೆಸಿತು ಮತ್ತು ಜೂನ್ ನಲ್ಲಿ ಹಿಂದಿರುಗಿ ಯೂರೋಪ್ ಗೆ ಬಂದ ನಂತರ ದುರಸ್ತಿಗಳು ಪೂರ್ಣಗೊಳ್ಳುವವರೆಗೂ ಅನೇಕ ಬದಲಾವಣೆಗಳ ಅಗತ್ಯವಿತ್ತು, ಅಲ್ಲಿ ಕ್ವೀನ್ ಮೇರಿ೨ ಡ್ರೈ ಡಾಕ್ ಗೆ ಭೇಟಿ ನೀಡಿ, ಹಾನಿಗೊಂಡ ಚಾಲಕ ಪಾಡ್‌ನ್ನು ಸರಿಪಡಿಸಲಾಯಿತು.[೪೮] ನವಂಬರ್‌ನಲ್ಲಿ ಕ್ವೀನ್ ಮೇರಿ ೨ ದುರಸ್ತಿಗೊಂಡ ಚಾಲಕ ಪಾಡ್ ನ್ನು ಪುನರ್ ಸ್ಥಾಪಿಸಲು ಹ್ಯಾಂಬರ್ಗ್ (ಡ್ರೈ ಡಾಕ್ ಎಲ್ಬ್ ೧೭) ನ ಬ್ಲೋಮ್ + ವಾಸ್ ಅಂಗಳದಲ್ಲಿ ನಿಂತಿತು. ಇದೇ ಸಮಯದಲ್ಲಿ, ಹಡಗಿನ ಎಲ್ಲಾ ಬಾಲ್ಕನಿಗಳಲ್ಲಿ ಸುರಕ್ಷಿತ ನಿಯಂತ್ರಣಗಳನ್ನು ತರಲು ತುಂತುರು ವ್ಯವಸ್ಥೆಗಳನ್ನು ಅಳವಡಿಸಲಾಯಿತು, ಇದನ್ನು MS ಸ್ಟಾರ್ ಪ್ರಿನ್ಸ್‌ಸ್ ನಲ್ಲಿ ಅಳವಡಿಸಳಾಗಿತ್ತು. ಇದರ ಜೊತೆಗೆ, ವೀಕ್ಷಣೆಯಲ್ಲಿ ಸುಧಾರಣೆಯನ್ನು ತರುವ ಸಲುವಾಗಿ ಎರಡೂ ಸೇತುವೆಗಳ ರೆಕ್ಕೆಗಳನ್ನು ಎರಡು ಮೀಟರ್ ನಷ್ಟು ವಿಸ್ತರಿಸಲಾಯಿತು.[೪೯] ![]() ೨೩ ಫೆಬ್ರವರಿ ೨೦೦೬ ರಂದು ತನ್ನ ದಕ್ಷಿಣ ಅಮೇರಿಕಾದ ಪ್ರವಾಸವನ್ನು ಮುಗಿಸಿದ ನಂತರ, ಕ್ವೀನ್ ಮೇರಿ೨ ಲಾಂಗ್ ಬೀಚ್,ಕ್ಯಾಲಿಫೋರ್ನಿಯಾದಲ್ಲಿ ಶಾಶ್ವತವಾಗಿ ನೆಲೆಗೊಂಡಿದ್ದ ತನ್ನ ನಾಮಕಾವಸ್ತೆ RMS Queen Mary ನ್ನು ಭೇಟಿ ಮಾಡಿತು. ಚಿಕ್ಕ ಹಡಗುಗಳ ನೌಕಾ ಸಮೂಹದ ರಕ್ಷಣೆಯಲ್ಲಿ ಎರಡೂ ಕ್ವೀನ್ ಗಳು " ಸೀಟಿಯ ನಮಸ್ಕಾರ" ವನ್ನು ಪರಸ್ಪರ ವಿನಿಮಯ ಮಾಡೀಕೊಂಡವು, ಈ ಶಬ್ದ ಇಡೀ ಲಾಂಗ್ ಬೀಚ್ ನಗರದ ತುಂಬಾ ಕೇಳಿಸಿತು.[೫೦] ಕ್ವೀನ್ ಮೇರಿ ೨ ೧೩ ಜನವರಿ ೨೦೦೮ ರಂದು ನ್ಯೂಯಾರ್ಕ್ ನಗರದ ಬಂದರಿನ ಲಿಬರ್ಟಿ ಪ್ರತಿಮೆ ಯ ಬಳಿ ಬೇರೆ ಕುನಾರ್ಡ್ ಹಡಗುಗಳಾದ Queen Victoria ಮತ್ತು ಕ್ವೀನ್ ಎಲಿಜಬೆತ್೨ ನ್ನು ಸಂಧಿಸಿತು, ಪಟಾಕಿ ಸಿಡಿಸುವಿಕೆಯ ಆಚರಣೆಯೊಂದಿಗೆ, ಕ್ವೀನ್ ಎಲಿಜಬೆತ್ ೨ ಮತ್ತು ಕ್ವೀನ್ ವಿಕ್ಟೋರಿಯಾ ಅಟ್ಲಾಂಟಿಕ್ ನ್ನು ಜೋಡಿಯಾಗಿ ದಾಟಿದವು. ಇದು ಮೂರು ಕುನಾರ್ಡ್ ಕ್ವೀನ್ ಗಳು ಒಂದೇ ಸಮಯದಲ್ಲಿ ಹಾಗೂ ಒಂದೇ ಸ್ಥಳದಲ್ಲಿ ಸಂಧಿಸುವುದಕ್ಕೆ ಸಾಕ್ಷಿಯಾಯಿತು. ಕ್ವೀನ್ ಎಲಿಜಬೆತ್ ೨ ' ೨೦೦೮ ರ ಕೊನೆಯಲ್ಲಿ ನಿವೃತ್ತಿ ಹೊಂದುವುದರಿಂದ[೫೧] ಈ ಮೂರು ಹಡಗುಗಳು ಭೇಟಿಯಾಗುವುದು ಇದೇ ಕೊನೆಯ ಸಾರಿ ಎಂದು ಕುನಾರ್ಡ್ ಅಭಿಪ್ರಾಯಪಟ್ಟರು.[೫೨] ಆದರೆ ಏಪ್ರಿಲ್ ೨೦೦೮ರಲ್ಲಿ ಈ ಮೂರು "ಕ್ವೀನ್ ಗಳು" ಸೌತ್ ಆಂಪ್ಟನ್ ನಲ್ಲಿ ಮತ್ತೆ ಭೇಟಿಯಾದ್ದರಿಂದ ಈ ಅಭಿಪ್ರಾಯ ನಿಜವಾಗಲಿಲ್ಲ.[೫೩][೫೪] ಕ್ವೀನ್ ಮೇರಿ ೨ ಕ್ವೀನ್ ಎಲಿಜಬೆತ್ ೨ ನೊಂದಿಗೆ ೨೧ಮಾರ್ಚ್ ೨೦೦೯ ರ ಶನಿವಾರದಂದು ದುಬೈನಲ್ಲಿ ಸಾಂಕೇತಿಕ ಸ್ಥಳದಲ್ಲಿ ಭೇಟಿ ಮಾಡಿ, ಹಡಗಿನ ನಿವೃತ್ತಿಯ ನಂತರ,[೫೫] ಎರಡೂ ಹಡಗುಗಳು ಮೀನಾ ರಶೀದ್ ನಲ್ಲಿ ತಂಗಿದವು.[೫೬] ಕ್ವೀನ್ ಎಲಿಜಬೆತ್ ೨, ಕ್ವೀನ್ ಮೇರಿ ೨ ಯವರ ನಿವೃತ್ತಿಯೊಂದಿಗೆ ಕ್ರಿಯಾತ್ಮಕ ಸಮುದ್ರಯಾನ ಸೇವೆಯಲ್ಲಿ ಕೇವಲ ಕ್ರಿಯಾತ್ಮಕ ಸಮುದ್ರಯಾನ ಹಡಗುಗಳು ಮಾತ್ರ ಉಳಿದುಕೊಳ್ಳುತ್ತವೆ. ಕ್ವೀನ್ ಮೇರಿ ೨ ೧೦ ಜನವರಿ ೨೦೦೭ ರಂದು ತನ್ನ ಮೊದಲ ಪ್ರಪಂಚ ಪರ್ಯಟನೆಯನ್ನು ಪ್ರಾರಂಭಿಸಿ ಇಡೀ ಭೂಮಿಯನ್ನು ೮೧ ದಿನಗಳಲ್ಲಿ ಸುತ್ತಿ ಬಂದಿತು. ೨೦ ಫೆಬ್ರವರಿ ಯಂದು, ೨೦೦೭ರ ಪರ್ಯಟನೆಯಲ್ಲಿ ಅದು ತನ್ನ ನೌಕಾ ಸಂಗಾತಿಯಾದ ಕ್ವೀನ್ ಎಲಿಜಬೆತ್ ೨ ನ್ನು ಸಿಡ್ನಿ ಬಂದರು ನಲ್ಲಿ ಭೇಟಿ ಮಾಡಿತು. [೫೭] ೧೯೪೧ ಮೂಲ ಕ್ವೀನ್ ಮೇರಿ ಮತ್ತು ಕ್ವೀನ್ ಎಲಿಜಬೆತ್ ಸಮೂಹ ಹಡಗುಗಳಾಗಿ ಸೇವೆ ಸಲ್ಲಿಸಿದಂದಿನಿಂದ ಇದೇ ಮೊಟ್ಟ ಮೊದಲ ಬಾರಿಗೆ ಎರಡು ಕುನಾರ್ಡ್ ಮಹಾರಾಣಿಯರು ಸಿಡ್ನಿಯಲ್ಲಿ ಭೇಟಿಯಾಗಿದ್ದರು.[೫೮] ಮುಂಜಾನೆ ೫:೪೨ ಕ್ಕೆ ಬಹಳ ಬೇಗನೆ ಆಗಮಿಸಿದರೂ ಸಹ, ಸಿಡ್ನಿ ಹಾರ್ಬರ್ ಬ್ರಿಡ್ಜ್ ನಲ್ಲಿ ಅನೇಕ ವೀಕ್ಷರನ್ನು ಕ್ವೀನ್ ಮೇರಿ ೨ ' ಆಕರ್ಷಿಸಿತು ಮತ್ತು ಇದರಿಂದ ಅಂಜಾಕ್ ಸೇತುವೆ ಯು ಮುಚ್ಚಲ್ಪಟ್ಟಿತು.[೫೯] ೧,೬೦೦ ಪ್ರಯಾಣಿಕರನ್ನು ಸಿಡ್ನಿಯಲ್ಲಿ ಬಿಡುವುದರ ಮೂಲಕ, ಕುನಾರ್ಡ್ ಸ್ಥಳೀಯ ಆರ್ಥಿಕತೆಯಲ್ಲಿ $೩ ಮಿಲಿಯನ್ ಗಿಂತಲೂ ಹೆಚ್ಚು ಸ್ಟಾಪ್ ಒವರ್ ಗಳು ಸೇರಬಹುದು ಎಂದು ಅಂದಾಜು ಮಾಡಿದರು.[೬೦] ![]() ಜುಲೈ ೨೦೦೭ ರಲ್ಲಿ ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲ್ ಕ್ವೀನ್ ಮೇರಿ ೨ ಯ ಮೇಗಾರಚನೆಗಳನ್ನು ಕುರಿತ ಒಂದು ಸಾಕ್ಷ್ಯ ಚಿತ್ರವನ್ನು ಪ್ರಸಾರಮಾಡಿತು.[೬೧] ಅಕ್ಟೋಬರ್ ೨೦೦೯ ರಂದು ಕ್ವೀನ್ ಮೇರಿ ಬ್ರಿಟೀಷ್ ಐಸ್ಲೆ ಸುತ್ತ ತನ್ನ ೮- ನೇ ರಾತ್ರಿ ಯಾನವನ್ನು ಪೂರ್ಣಗೊಳಿಸುವುದರ ಮೂಲಕ ತನ್ನ ಸೇವೆಯ ೫ ನೇ ವರ್ಷವನ್ನು ಆಚರಿಸಿಕೊಂಡಿತು. ಸಮುದ್ರ ಪರ್ಯಟನೆಯು ಗ್ರೀನಾಕ್[೬೨] ಮತ್ತು ಲಿವರ್ ಪೂಲ್ ನ ಮೊದಲ ಭೇಟಿಗಳನ್ನು ಒಳಗೊಂಡಿತ್ತು.[೬೩] ಬೋಸ್ಟನ್ ಕಪ್ಕ್ಯುಎಮ್೨ ಬೋಸ್ಟನ್ ಕಪ್. ಕೆಲವು ಸಮಯದಲ್ಲಿ, ದಿ ಬ್ರಿಟಾನಿಯಾ ಕಪ್ ಎಂಬ ಮಾನವ ನಿರ್ಮಿತ ವಸ್ತುವನ್ನು ಬೋಸ್ಟನ್ ನಲ್ಲಿ ಸರ್ ಸಾಮುವೇಲ್ ಕುನಾರ್ಡ್ ರವರು ತಮ್ಮ ಮೊದಲನೇ ಹಡಗನ್ನು RMS Britanniaತಂದಿದ್ದರ ಸ್ಮರಣಾರ್ಥ ಎಂದು ಪರಿಗಣಿಸಲಾಗುತ್ತದೆ.[೬೪] ಕುನಾರ್ಡ್ ತಮ್ಮ ಅಟ್ಲಾಂಟಿಕ್ ಸೇವೆಗಾಗಿ ಬೋಸ್ಟನ್ ನ್ನು ಅಮೇರಿಕಾದ ಬಂದರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು, ಇದು ಬೋಸ್ಟನ್ ಮತ್ತು ಕುನಾರ್ಡ್ ನಡುವಣ ಪ್ರಬಲ ಸಂಪರ್ಕಕ್ಕೆ ನಾಂದಿಯಾಯಿತು.[೬೫] ೧೮೪೦ರಲ್ಲಿ ಸರ್ ಸಾಮುವೇಲ್ ರವರಿಗೆ ಈ ಪಾರಿತೋಷಕವನ್ನು ಉಡುಗೊರೆಯಾಗಿ ಕೊಡಲಾಗಿತ್ತು ಎಂದು ಅಭಿಪ್ರಾಯ ಪಡಲಾಗಿದೆ; ಆದರೆ ಅವರ ಜೀವನದ ಬಹಳ ದಿನಗಳ ವರೆಗೆ ಇದನ್ನು ಕಳೆದುಕೊಂಡಿದ್ದರು. ೧೯೬೭ ರಲ್ಲಿ ಒಂದು ಪ್ರಾಚೀನ ವಸ್ತುಗಳಿರುವ ಅಂಗಡಿಯೊಂದರಲ್ಲಿ ಇದನ್ನು ಕಂಡು ಹಿಡಿದು ಕುನಾರ್ಡ್ ರವರಿಗೆ ಹಿಂದಿರುಗಿಸಲಾಯಿತು, ನಂತರ ಇದನ್ನು ಕ್ವೀನ್ ಎಲಿಜಬೆತ್ ೨ ನಲ್ಲಿ ಇರಿಸಲಾಯಿತು. ೨೦೦೪ರಲ್ಲಿ QM೨ ಸೇನಾಪತಿ ಹಡಗು ಆಗಿ ಪರಿವರ್ತನೆಗೊಂಡಾಗ, ಬೋಸ್ಟನ್ ಪಾರಿತೋಷಕವನ್ನು ಕುನಾರ್ಡ್ ಸೇನಾಪತಿ ಹಡಗಿನ ಒಂದು ಸಂಕೇತವಾಗಿ QM೨ ನಲ್ಲಿ ಇರಿಸಲಾಯಿತು.[೬೪] ಇದನ್ನು ಚಾರ್ಟ್ ರೂಮ್ ಲೌಂಜ್ ನ ಒಂದು ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು.[೬೬] ಪುನರಾವರ್ತಿತ ಚಾಲನೆ ವೈಫಲ್ಯಗಳುQM೨ ಗೆ ಜೋಡಿಸಿದ್ದ ರಾಲ್ಸ್ -ರೋಯ್ಸ್ ಮತ್ಸ್ಯ ಚಾಲಿತ ಪಾಡ್ ಗಳು ನಿರಂತರ ವೈಫಲ್ಯಗಳನ್ನು ಸಾಬೀತು ಪಡಿಸಿತು. ಈ ವೈಫಲ್ಯತೆಯು ಆಗಾಗ್ಗೆ ಮುಂದುವರೆದು ರಾಲ್ಸ್- ರೋಯ್ಸ್ ಕಾರ್ಪ್. ಹೊಂದಿದ್ದ ಕುನಾರ್ಡ್ ಲೈನ್ ಡಿವಿಜನ್ ನ್ನು ಕಾರ್ನಿವಲ್ ಕಾರ್ಪ್ ವಹಿಸಿಕೊಳ್ಳ ಬೇಕಾಯಿತು, ನಂತರ ಇದು ಜನವರಿ ೨೦೦೯ ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ನ್ಯಾಯಾಲಯದಲ್ಲಿ ಇದು ದಾಖಲಾಯಿತು. ಮೊದಲನೆಯದು ಕುನಾರ್ಡ್ ಲೈನ್ ನ ಸೇನಾಪತಿ ಹಡಗು ಆದ ಕ್ವೀನ್ ಮೇರಿ ಯಲ್ಲಿ ಅಳವಡಿಸಿದ್ದ ಮತ್ಸ್ಯ ಪಾಡ್ ವ್ಯವಸ್ಥೆಗಳ ವಿನ್ಯಾಸದಲ್ಲೇ ದೋಷವಿದೆ ಎಂದು ಮೊಕದ್ದಮೆ ಹಾಕಿತು. ಆದರೆ ಕುನಾರ್ಡ್ ರೋಲ್ಸ್ ರೋಯ್ಸ್‌ಗೆ ವಿನ್ಯಾಸದ ಲೋಪಗಳು ಮೊದಲೇ ತಿಳಿದಿದ್ದು, ಗುತ್ತಿಗೆಯನ್ನು ಗೆಲ್ಲುವುದಕ್ಕೋಸ್ಕರ ಉದ್ದೇಶ ಪೂರ್ವಕವಾಗಿ ತಮ್ಮನ್ನು ಮೋಸಗೊಳಿಸಲಾಗಿದೆ ಎಂದು ಪ್ರತಿವಾದಿಸಿದರು. ಆಚಿಲ್ಲೆಸ್ ಹೀಲ್ ನ ವಿನ್ಯಾಸದಲ್ಲಿ ಬಿಯರಿಂಗ್ ಗಳನ್ನು ಅಧಿಕ ಪ್ರಮಾಣದಲ್ಲಿ ಅಳವಡಿಸಿದರೂ, ಹಲವಾರು ಬಾರಿ ಮರು ವಿನ್ಯಾಸ ಮಾಡುವ ಪ್ರಯತ್ನದ ಹೊರತಾಗಿಯೂ ವೈಫಲ್ಯವನ್ನು ಅನುಭವಿಸಿತು.[೬೭] ಜನವರಿ ೨೦೧೧ ರಂದು ಪ್ರೊಪಲ್ಸರ್ ಗಳ ನಿರಂತರ ವೈಫಲ್ಯದಿಂದಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ ಕಾರ್ನಿವಲ್ ಕಾರ್ಪೊರೇಷನ್ ಗೆ US$೨೪ ಮಿಲಿಯನ್ (ಸುಮಾರು.UK£೧೫ ಮಿಲಿಯನ್ ಗೆ ಸಮ) ಬಹುಮಾನ ದೊರೆಯಿತು.[೬೮] ಕುನಾರ್ಡ್ ರಾಯಲ್ ರೆಂಡೇಝ್ವಸ್ಜನವರಿ, ೨೦೧೧ ಅದೇ ದಿನಾಂಕದಂದು ಮೊದಲ ರಾಯಲ್ ರೆಂಡಿವಸ್ ನ ಎರಡು ವರ್ಷಗಳ ನಂತರ ಕ್ವೀನ್ ಮೇರಿ೨ Queen Victoria ರೊಂದಿಗೆ ಸಂಧಿಸಿತು ಮತ್ತು ೧೩ ಜನವರಿ ೨೦೧೧ ರಂದು ನ್ಯೂಯಾರ್ಕ್ ನಗರದಲ್ಲಿ ಹೊಚ್ಚ ಹೊಸದಾದ ಮತ್ತೊಂದು ರಾಯಲ್ ರೆಂಡಿವಸ್ ನ್ನು ಭೇಟಿ ಮಾಡಿತು. Queen Victoria ಹಾಗೂ MS ಕ್ವೀನ್ ಎಲಿಜಬೆತ್ ಗಳೆರಡೂ ಅಟ್ಲಾಂಟಿಕ್ ನ್ನು ಜೊತೆಯಾಗಿ ದಾಟಿದವು. ಪಟಾಕಿ ಸಿಡಿಸುವಿಕೆ ಕಾರ್ಯಕ್ರಮಕ್ಕಾಗಿ ಎಲ್ಲಾ ಮೂರು ಹಡಗುಗಳೂ ಸಂಜೆ ೬:೪೫ ಕ್ಕೆ ಲಿಬರ್ಟಿ ಪ್ರತಿಮೆಯ ಬಳಿ ಬಂದವು. ಈ ಘಟನೆಗೆ ಸಾಕ್ಷಿ ಎಂಬಂತೆ ಇಡೀ ಕಟ್ಟಡವು ಕೆಂಪು ಬಣ್ಣದಲ್ಲಿ ಪ್ರಕಾಶ ಮಾನವಾಗಿ ಹೊಳೆಯುತ್ತಿತ್ತು.[೬೯] ೫ನೆಯ ಜೂನ್ ೨೦೧೨: ಈ ಎಲ್ಲಾ ಕ್ವೀನ್ ಗಳು ಮತ್ತೊಮ್ಮೆ ಭೇಟಿಯಾಗುವ ಅವಕಾಶ ಬಂದೊದಗಿತು,ಆದರೆ ಈ ಬಾರಿ ಸೌತ್ ಆಂಪ್ಟನ್ ನಲ್ಲಿ ಎಲಿಜಬೆತ್ II ನ ವಜ್ರ ಮಹೋತ್ಸವವನ್ನು ಆಚರಿಸಲು ಸೇರಿದ್ದವು.[೭೦] ಪರಿಸರಕ್ಕಾಗಿ ಕಾರ್ಯನಿರ್ವಹಣೆಕ್ವೀನ್ ಮೇರಿ೨ ಯನ್ನು ವಿನ್ಯಾಸಗೊಳಿಸುವ ಸಮಯದಲ್ಲಿ, ವಿನ್ಯಾಸಕಾರರು ಎಂಜಿನ್ ನ ದಕ್ಷತೆಯನ್ನು ಹೆಚ್ಚಿಸುವುದರ ಮೂಲಕ ಹಡಗಿನಿಂದಾಗುವ ಪರಿಸರದ ಮೇಲಿನ ಹಾನಿಕಾರಕ ಪರಿಣಾಮಗಳನ್ನು ಕಡಿಮೆಮಾಡುವ ಉದ್ದೇಸ ಹೊಂದಿದ್ದರು ಮತ್ತು ತ್ಯಾಜ್ಯಗಳ ಉತ್ತಮ ನಿರ್ವಹಣೆಯಿಂದ ಇಂಧನದ ಬೆಲೆಯನ್ನು ಕಡಿಮೆಗೊಳಿಸಿವುದಷ್ಟೇ ಅಲ್ಲದೆ ಹಡಗಿನ ಸೇವೆಯನ್ನು ಉತ್ತಮಗೊಳಿಸುವ ಉದ್ದೇಶಹೊಂದಿದ್ದರು, ಏಕೆಂದರೆ ಪರಿಸರದ ನಿಯಮಗಳು ಈ ಹಡಗು ಸೇವೆಗೆ ಬರುವಷ್ಟರಲ್ಲಿ ಕಠಿಣವಾಗಬಹುದು ಎಂದು ಈ ಮೊದಲೇ ಊಹೆ ಮಾಡಲಾಗಿತ್ತು. ಆರಂಭದ ಗುರಿಗಳು ತಾಜ್ಯ ನೀರನ್ನು ಮರು ಸಂಸ್ಕರಣೆಗೊಳಿಸಿ ಬಳಸುವುದು ಮತ್ತು ಸಮುದ್ರದಲ್ಲಿ ಯಾವುದೇ ರೀತಿಯ ಘನ ತ್ಯಾಜ್ಯಗಳನ್ನು ಹಾಕದೇ ಇರುವುದನ್ನು ಒಳಗೊಂಡಿದ್ದವು. ಆರ್ಥಿಕ ಮತ್ತು ಇತರೆ ಕಾರಣಗಳಿಗೋಸ್ಕರ, ಹಾಗೂ ದಹನ ಕ್ರಿಯೆಯಿಂದ ಉಂಟಾಗುವ ಶಕ್ತಿಯ ಬಳಕೆಯನ್ನು ಕಡಿಮೆ ಮಾಡುವುದಕ್ಕೋಸ್ಕರ, ಇವುಗಳನ್ನು ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳಲು ಆಗಲಿಲ್ಲ. ಆದರೆ, ಅನೇಕ ಹಳೆಯ ಹಡುಗಳಿಗೆ ಹೋಲಿಸಿದಲ್ಲಿ ಕ್ವೀನ್ ಮೇರಿ೨ 'ಯ ಪರಿಸರ ಸಂಬಂಧಿ ಕಾರ್ಯಾಚರಣೆಯು ಮಿತಿ ಮೀರಿದೆ, ಅಷ್ಟೇ ಅಲ್ಲದೆ ತ್ಯಾಜ್ಯಗಳ ಅಂತರಾಷ್ಟ್ರೀಯ ಗುಣ ಮಟ್ಟದ ವಿವರ ಈ ಕೆಳಗಿದೆ.[೨೪][೪೧] ಕುನಾರ್ಡ್ ಪ್ರಕಾರ, ಅಂತರಾಷ್ಟ್ರೀಯ ಮ್ಯಾರಿ ಟೈಮ್ ಸಂಸ್ಥೆಯ ಹಡಗುಗಳಿಂದಾಗುವ ಮಾಲಿನ್ಯವನ್ನು ತಡೆಗಟ್ಟುವ ಅಂತರಾಷ್ಟ್ರೀಯ ಒಪ್ಪಂದದ (MARPOL) ಅವಶ್ಯಕತೆಗಳನ್ನೂ ಮೀರಿದೆ. ಉದಾಹರಣೆಗೆ, MARPOL ಸಂಸ್ಕರಿಸಿದ ತ್ಯಾಜ್ಯಗಳನ್ನು ಹಾಗೂ ನೀರನ್ನು ಮಾತ್ರವೇ ತೀರ ಪ್ರದೇಶಗಳ ಸಮೀಪದಲ್ಲಿ ಹೊರಬಿಡುವುದಕ್ಕೆ ಅನುಮತಿ ನೀಡಿದ್ದರೂ,ಇದು ಯಾವುದೇ ತೀರ ಪ್ರದೇಶದಲ್ಲಿ ಬಿಡುಗಡೆ ಮಾಡದಷ್ಟು ತ್ಯಾಜ್ಯಗಳನ್ನು 12 nmi (14 mi) ಕ್ಕಿಂತ ಹೆಚ್ಚು ಹೊರಹಾಕುತ್ತಿತ್ತು. ಅಪಾಯಕಾರಿ ವಸ್ತುಗಳು, ವಿಶೇಷವಾಗಿ ಸಂಸ್ಕರಿಸಿದ ನೀರಿನಲ್ಲಿರುವ ತೈಲ ಅಂಶಗಳು ಮತ್ತು ವಾಯು ಮಲಿನಕಾರಕಗಳನ್ನು ಪರಿಸರದ ಗುಣಮಟ್ಟಗಳಿಗೆ ಅನುಗುಣವಾಗಿ ನಿಯಂತ್ರಣದಲ್ಲಿಡುವುದು ಅತ್ಯವಶ್ಯಕವಾಗಿದೆ.[೪೧] ಆಮ್ಲ ಮಳೆ ಗೆ ಕಾರಣವಾದ ಸಲ್ಫರ್ ಡೈ ಆಕ್ಸೈಡ್ ನಿಂದ ಉಂಟಾಗುವ ವಾಯುಮಾಲಿನ್ಯ ಪ್ರದೇಶಗಳಲ್ಲಿ, ವಾಯು ಮಾಲಿನ್ಯವನ್ನು ಕಡಿಮೆ ಮಾಡುವುದಕ್ಕೋಸ್ಕರ ಹಡಗುಗಳಲ್ಲಿ ಕಡಿಮೆ ಸಲ್ಪರ್ ಡೈ ಆಕ್ಸೈಡ್ ಇರುವ ಇಂಧನಗಳನ್ನು ಬಳಸಲಾಗುತ್ತದೆ.[೪೧] ಕಾರ್ಬನ್ ಆಫ್ ಸೆಟ್ ಕಂಪನಿ ಕ್ಲೈಮೇಟ್ ಕೇರ್ ಪ್ರಕಾರ ಪ್ರತಿ ಪ್ಯಾಸೆಂಜರ್ ಮೈಲಿಗೆ ಪ್ಯಾಸೆಂಜರ್ ಹಡಗುಗಳು ವಾತಾವರಣಕ್ಕೆ ಬಿಡುಗಡೆ ಮಾಡುವ ಕಾರ್ಬನ್ ಡೈ ಆಕ್ಸೈಡ್ ನ ಪ್ರಮಾಣ ದೂರ ಪ್ರಯಾಣ ಮಾಡುವ ಹಡಗುಗಳಿಗಿಂತ ಹೆಚ್ಚಾಗಿರುತ್ತದೆ. ಆದರೆ, ಕುನಾರ್ಡ್ ಹಡಗಿನ ಎಂಜಿನ್ ನ ದಕ್ಷತೆಯನ್ನು ಹೆಚ್ಚಿಸುವುದರ ಮೂಲಕ ಹಾಗೂ ಹಡಗು ಚಲನೆಯಲ್ಲಿರುವಾಗ ಘರ್ಷಣೆಯನ್ನು ಕಡಿಮೆ ಮಾಡುವುದರ ಮೂಲಕ ಕ್ವೀನ್ ಮೇರಿ ೨ ಯ ಕಾರ್ಬನ್ ಹೊರಸೂಸುವಿಕೆ ಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿತು. ನವಂಬರ್ ೨೦೦೮ ರಲ್ಲಿ ಹಂಬರ್ಗ್ ನಲ್ಲಿ ಹಡಗನ್ನು ಪುನರ್ ಜೋಡಿಸುವ ಕಾರ್ಯವನ್ನು ನಡೆಸಲಾಯಿತು, ಇದರಲ್ಲಿ ಸೆಳೆತವನ್ನು ಕಡಿಮೆಗೊಳಿಸಲು ಹಡಗಿನ ಹೊದಿಕೆಯನ್ನು ಪುನರ್ ವಿನ್ಯಾಸಗೊಳಿಸಿ ಬಣ್ಣ ಹಚ್ಚಲಾಯಿತು ಮತ್ತು ಇದರ ಮೂಲಕ ಇಂಧನದ ಆರ್ಥಿಕತೆಯನ್ನೂ ಸುಧಾರಿಸಲಾಯಿತು.[೪೧][೭೧][೭೨] ಜನಪ್ರಿಯ ಸಂಸ್ಕೃತಿಯಲ್ಲಿತನ್ನ ಜನಪ್ರಿಯತೆಯ ಕಾರಣದಿಂದ, QM೨ ಚಲನಚಿತ್ರಗಳಲ್ಲಿ ಸಮುದ್ರ ಪರ್ಯಟನೆ ಹಡಗುಗಳ ವಿನ್ಯಾಸಗಳಿಗೆ ಸ್ಪೂರ್ತಿ ತಂದು ಕೊಟ್ಟಿತು. ಎ.ಐ. ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಎನ್ನುವ ಚಲನಚಿತ್ರದಲ್ಲಿ, ಐಸ್ ಏಜ್ ನ ಸಮಯದಲ್ಲಿ ಹಿಮಗಟ್ಟಿದ ನ್ಯೂಯಾರ್ಕ್ ಪಟ್ಟಣ ದಲ್ಲಿರುವ ಎರಡು ಗಗನ ಚುಂಬಿ ಕಟ್ಟಡಗಳ ಮಧ್ಯೆ QM೨ ನಂತೆಯೇ ಇರುವ ಒಂದು ಪ್ರವಾಸಿ ಹಡಗು ಸಿಕ್ಕಿ ಹಾಕಿಕೊಳ್ಳುವ ದೃಶ್ಯವನ್ನು ನೋಡಬಹುದು. "'ಪೊಸಿಡಾನ್ , 10.5: Apocalypse, ಮತ್ತು ೨೦೧೨ ರಂತಹ ಚಲನಚಿತ್ರಗಳಲ್ಲಿ ಸುನಾಮಿ ಯಿಂದ ಮಗುಚಿ ಬೀಳುವ ಅನೇಕ ಹಡಗುಗಳ ವಿನ್ಯಾಸಕ್ಕೆ QM೨ ಸ್ಪೂರ್ತಿದಾಯಕವಾಗಿದೆ. ಉಲ್ಲೇಖಗಳು
ಬಾಹ್ಯ ಕೊಂಡಿಗಳುRMS Queen Mary 2 ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
|